UDUPI : ವಾಟ್ಸಾಪ್ ಸ್ಟೇಟಸ್ ವಿಚಾರ ಪರಸ್ಪರ ಹೊಡೆದಾಟ : ಆರು ಮಂದಿ ಬಂಧನ – vishwanews24
ವಾಟ್ಸಾಪ್ ಸ್ಟೇಟಸ್ ವಿಚಾರ ಪರಸ್ಪರ ಹೊಡೆದಾಟ : ಆರು ಮಂದಿ ಬಂಧನ
ಅಜೆಕಾರು: ಕುಕ್ಕುಜೆ ಗ್ರಾಮದ ದೊಂಡೆರಂಗಡಿ ಪೇಟೆಯಲ್ಲಿ ಆ.8ರಂದು ಬೆಳಗ್ಗೆ ವಾಟ್ಸಾಪ್ ಸ್ಟೇಟಸ್ ವಿಚಾರದಲ್ಲಿ ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದ ಆರು ಮಂದಿಯನ್ನು ಅಜೆಕಾರು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಡ್ತಲ ಗ್ರಾಮದ ನಿತ್ಯಾನಂದ(33), ಅಂಕಿತ್(27), ಕುಕ್ಕುಜೆ ಗ್ರಾಮದ ರೂಪೇಶ್ ಕುಮಾರ್(28), ಎಳ್ಳಾರೆ ಗ್ರಾಮದ ಉದಯ(33), ಕಕ್ಕುಂಜೆ ಗ್ರಾಮದ ದೀಕ್ಷಿತ್ (25), ರವೀಂದ್ರ(38) ಎಂಬವರು ವಾಟ್ಸಾಪ್ ಸ್ಟೇಟಸ್ ವಿಚಾರದಲ್ಲಿ ಅಕ್ರಮ ಕೂಟ ಸೇರಿ, ಪರಸ್ಪರ ಕೈ ಕೈ ಮಿಲಾಯಿಸಿ ಗಲಾಟೆ ಮಾಡುತ್ತಿದ್ದರು. ಎಂದು ದೂರಲಾಗಿದೆ.
ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
