Ukraine Russia War : ಕರ್ನಾಟಕದಲ್ಲಿ ಸೂರ್ಯಕಾಂತಿ ಅಡುಗೆ ಎಣ್ಣೆ ಬೆಲೆ 100 ರೂ. ಹೆಚ್ಚಳ -Vishwanews24
ರಷ್ಯಾ -ಉಕ್ರೇನ್ ಯುದ್ಧ ಪರಿಣಾಮ : ಕರ್ನಾಟಕದಲ್ಲಿ ಸೂರ್ಯಕಾಂತಿ ಅಡುಗೆ ಎಣ್ಣೆ ಬೆಲೆ 100 ರೂ. ಹೆಚ್ಚಳ -Vishwanews24
ಬೆಂಗಳೂರು: ರಷ್ಯಾ -ಉಕ್ರೇನ್ ಯುದ್ಧದ ಪರಿಣಾಮ ದೇಶೀಯ ಮಾರುಕಟ್ಟೆ ಮೇಲೆ ಉಂಟಾಗಿದೆ. ಯುದ್ಧ ಆರಂಭವಾಗಿ 12 ದಿನಗಳಾಗಿದ್ದು, ಕಾಳಸಂತೆಕೋರರು ಪರಿಸ್ಥಿತಿಯ ಲಾಭ ಪಡೆದುಕೊಂಡಿದ್ದು, ಸೂರ್ಯಕಾಂತಿ ಅಡುಗೆ ಎಣ್ಣೆ ದರವನ್ನು ಒಂದು ವಾರದಲ್ಲಿ 100 ರೂಪಾಯಿ ಹೆಚ್ಚಳ ಮಾಡಿದ್ದಾರೆ.
ದೇಶದಲ್ಲಿ 2 -3 ತಿಂಗಳಿಗಾಗುವಷ್ಟು ಅಡುಗೆ ಎಣ್ಣೆ ದಾಸ್ತಾನು ಇದ್ದರೂ ಕೂಡ ಸೂರ್ಯಕಾಂತಿ ಎಣ್ಣೆಯಲ್ಲಿ ಕೃತಕ ಅಭಾವ ಸೃಷ್ಟಿಸಿ ಈ ರೀತಿ ಬೆಲೆ ಏರಿಕೆ ಮಾಡಲಾಗಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಯುದ್ಧದ ಪರಿಣಾಮ ಸೂರ್ಯಕಾಂತಿ ಎಣ್ಣೆ ಆಮದು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ದರ ಏರಿಕೆಯಾಗಿದೆ.
