Union Budget 2021 : ಕೇಂದ್ರ ಬಜೆಟ್ ನಲ್ಲಿ ಸಿಲಿಕಾನ್ ಸಿಟಿ ಜನರಿಗೆ ‘ಬಂಪರ್’ ಕೊಡುಗೆ , ಮತ್ತೆರಡು ಹೊಸ ‘ಮೆಟ್ರೋ ಮಾರ್ಗ’ ಘೋಷಣೆ-Vishwanews24
Union Budget 2021 : ಕೇಂದ್ರ ಬಜೆಟ್ ನಲ್ಲಿ ಸಿಲಿಕಾನ್ ಸಿಟಿ ಜನರಿಗೆ ‘ಬಂಪರ್’ ಕೊಡುಗೆ , ಮತ್ತೆರಡು ಹೊಸ ‘ಮೆಟ್ರೋ ಮಾರ್ಗ’ ಘೋಷಣೆ-Vishwanews24
ನವದೆಹಲಿ : ಇಂದು ಕೇಂದ್ರ ಬಜೆಟ್-2021-22 ಮಂಡನೆಯಾಗುತ್ತಿದೆ. ಇಂತಹ ಬಜೆಟ್ ನಲ್ಲಿ ಸಿಲಿಕಾನ್ ಸಿಟಿ ಜನರಿಗೆ ಭರ್ಜರಿ ಗುಡ್ ನ್ಯೂಸ್ ನೀಡಲಾಗಿದೆ. ಬೆಂಗಳೂರಿಗೆ ಮತ್ತೆರಡು ಮೆಟ್ರೋ ಹೊಸ ಮಾರ್ಗಗಳಿಗೆ ಕೇಂದ್ರ ಸರ್ಕಾರ ಅನುದಾನ ಘೋಷಿಸುವ ಮೂಲಕ, ಹೊಸ ಮೆಟ್ರೋ ಮಾರ್ಗಗಳಿಗೆ ಗ್ರೀನ್ ಸಿಗ್ನಲ್ ನೀಡಿದೆ. ಈ ಮೂಲಕ ನಗರದಲ್ಲಿ ಈಗಾಗಲೇ ಇರುವ ಮಾರ್ಗಗಳ ಜೊತೆಗೆ ಮತ್ತೆರಡು ಮೆಟ್ರೋ ಮಾರ್ಗಗಳು ಬರಲಿವೆ.
ಈ ಕುರಿತಂತೆ ಬಜೆಟ್ ಮಂಡನೆ ವೇಳೆ ಮಾತನಾಡಿದಂತ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, 2ಎ ಮತ್ತು 2ಬಿ ಹಂತದಲ್ಲಿ ಎರಡು ಮೆಟ್ರೋ ಮಾರ್ಗಗಳನ್ನು ಹೊಸದಾಗಿ ನಿರ್ಮಾಣ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ 58.19 ಕಿಲೋಮೀಟರ್ ಮೆಟ್ರೋ ಮಾರ್ಗದಲ್ಲಿ ಹೊಸ ಮೆಟ್ರೋ ಸಂಚಾರ ಆರಂಭಕ್ಕೆ ಅನುದಾವಾಗಿ 14 ಸಾವಿರ ಕೋಟಿ ಮೀಸಲಿಡಲಾಗುತ್ತಿದೆ ಎಂಬುದಾಗಿ ಘೋಷಿಸಿದರು. ಈ ಮೂಲಕ ಬೆಂಗಳೂರಿಗರಿಗೆ ಭರ್ಜರಿ ಗುಡ್ ನ್ಯೂಸ್ ನೀಡರು.
