Union Budget 2022 : 2023ರಿಂದ ಹೊಸ ತಂತ್ರಜ್ಞಾನದೊಂದಿಗೆ ಇ-ಪಾಸ್ ಪೋರ್ಟ್ ವ್ಯವಸ್ಥೆ ಜಾರಿ – Vishwanews24
Union Budget 2022 : 2023ರಿಂದ ಹೊಸ ತಂತ್ರಜ್ಞಾನದೊಂದಿಗೆ ಇ-ಪಾಸ್ ಪೋರ್ಟ್ ವ್ಯವಸ್ಥೆ ಜಾರಿ ..
ಮನೆ ಮನೆಗೆ ನಲ್ಲಿ ನೀರಿನ ವ್ಯವಸ್ಥೆ..
ಆಸ್ತಿ ನೋಂದಣಿಗೆ ಡಿಜಿಟಲ್ ವ್ಯವಸ್ಥೆ ಜಾರಿ.. ಒನ್ ನೇಷನ್ ಒನ್ ರಿಜಿಸ್ಟ್ರೇಷನ್ ..
ಹೊಸ ತಂತ್ರಜ್ಞಾನದೊಂದಿಗೆ ಇ-ಪಾಸ್ ಪೋರ್ಟ್ ವ್ಯವಸ್ಥೆಯನ್ನು 2023ರಿಂದ ಜಾರಿಗೊಳಿಸಲಾಗುತ್ತದೆ. ದೇಶದಲ್ಲಿ ಅನಾವಶ್ಯಕವಾಗಿರುವಂತ ಕೇಂದ್ರದ 1483 ಕಾನೂನುಗಳನ್ನು ರದ್ದುಪಡಿಸಲಾಗುತ್ತದೆ ಎಂದು ಘೋಷಿಸಿದರು.
ಮನೆ ಮನೆಗೆ ನಲ್ಲಿ ನೀರಿನ ವ್ಯವಸ್ಥೆ ಮಾಡಲಾಗುವುದು ಅತ ಹೇಳಿದ ಅವರು ಇದಕ್ಕಾಗಿ 48 ಸಾವಿರ ಕೋಟಿ ಹಣ ಖರ್ಚಾಗುವುದು ಅಂತ ಹೇಳಿದರು. ಇದೇ ವೇಳೆ ಅವರು ಮಾತನಾಡಿ 1483 ಕೇಂದ್ರ ಕಾನೂನುಗಳು ರದ್ದು ಮಾಡಲಾಗಿದೆ ಅಂಥ ಅವರು ತಿಳಿಸಿದರು. ನಾಗರಿಕರಿಗೆ ಅನುಕೂಲವಾಗುವಂತೆ 2022-23ರಲ್ಲಿ ಇ-ಪಾಸ್‌ಪೋರ್ಟ್‌ಗಳನ್ನು ನೀಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ತಮ್ಮ ಬಜೆಟ್ ಭಾಷಣದಲ್ಲಿ ಘೋಷಿಸಿದರು. ಪಾಸ್‌ಪೋರ್ಟ್ ಜಾಕೆಟ್ ಎಲೆಕ್ಟ್ರಾನಿಕ್ ಚಿಪ್ ಅನ್ನು ಹೊಂದಿರುತ್ತದೆ, ಅದರಲ್ಲಿ ಪ್ರಮುಖ ಭದ್ರತೆ-ಸಂಬಂಧಿತ ಡೇಟಾವನ್ನು ಎನ್‌ಕೋಡ್ ಮಾಡಲಾಗಿದೆ ಅಂತ ಅವರು ಇದೇ ವೇಳೆ ತಿಳಿಸಿದರು.
ಇದನ್ನೂ ಓದಿ :
ಇದೇ ವೇಳೆ ಬಜೆಟ್ ಮಂಡನೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುತ್ತ. ಒನ್ ನೇಷನ್ ಒನ್ ರಿಜಿಸ್ಟ್ರೇಷನ್ (ಒಂದು ದೇಶ, ಒಂದು ನೋಂದಣಿ) ವ್ಯವಸ್ಥೆ ಸ್ಥಾಪನೆ. ಆಸ್ತಿ ನೋಂದಣಿಗೆ ಡಿಜಿಟಲ್ ವ್ಯವಸ್ಥೆ ಜಾರಿ,ಆಸ್ತಿ ನೋಂದಣಿ ಇನ್ಮುಂದೆ ಡಿಜಿಟಲೀಕರಣ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ :
