Union Budget 2025: ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ ಯಾವುದು ಅಗ್ಗ, ಯಾವುದು ದುಬಾರಿ? vishwanews24
Union Budget 2025: ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ ಯಾವುದು ಅಗ್ಗ, ಯಾವುದು ದುಬಾರಿ?
ನವದೆಹಲಿ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ತಮ್ಮ 8ನೇ ಬಜೆಟ್ ಮಂಡಿಸಿದ್ದಾರೆ. ಮಹಿಳೆಯರು, ರೈತರು, ಯುವಜನತೆ, ಬಡವರನ್ನು ಕೇಂದ್ರವಾಗಿಟ್ಟುಕೊಂಡು ಬಜೆಟ್‌ನಲ್ಲಿ ಕೊಡುಗೆ ನೀಡಿದ್ದಾರೆ. ಮಧ್ಯಮ ವರ್ಗದ ಆರ್ಥಿಕ ಸಬಲೀಕರಣಕ್ಕೆ ತೆರಿಗೆ ವಿನಾಯಿತಿ ಗಿಫ್ಟ್ ಕೊಟ್ಟಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್‌ನಲ್ಲಿ ಈ ಬಾರಿ ಯಾವ್ಯಾವ ವಸ್ತುಗಳು ಅಗ್ಗ ಮತ್ತು ಯಾವ್ಯಾವುವು ದುಬಾರಿ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
Union Budget 2025 – ಹಿರಿಯ ನಾಗರಿಕರಿಗೆ TDS ಮಿತಿಯಲ್ಲಿ ಹೆಚ್ಚಳ : ನಿರ್ಮಲಾ ಸೀತಾರಾಮನ್ – vishwanews24
ಯಾವುದು ದುಬಾರಿ
- ಫ್ಲ್ಯಾಟ್ ಪ್ಯಾನೆಲ್ ಡಿಸ್ ಪ್ಲೇ ಮೇಲೆ ತೆರಿಗೆ ಹೆಚ್ಚಳ
- ಹೆಣೆದ ಬಟ್ಟೆಗಳ ಮೇಲೆ ತೆರಿಗೆ ಹೆಚ್ಚಳ
- ಅಲ್ಕೋಹಾಲ್ ಮೇಲಿನ ಸುಂಕ ಏರಿಕೆ
- ತಂಬಾಕು ಪದಾರ್ಥಗಳ ಮೇಲಿನ ತೆರಿಗೆ ಹೆಚ್ಚಳ
- ಟೆಲಿಕಾಂ ಉಪಕರಣಗಳ ಮೇಲಿನ ಟ್ಯಾಕ್ಸ್ ಹೆಚ್ಚಳ
- ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕ ಹೆಚ್ಚಳ
- ವಿಮಾನ ಇಂಧನದ ಮೇಲಿನ ಟ್ಯಾಕ್ಸ್ ಹೆಚ್ಚಳ
ಯಾವುದು ಅಗ್ಗ
- ಎಲ್ಇಡಿ ಟಿವಿಗಳ ಮೇಲಿನ ಸುಂಕ ಇಳಿತ
- ಕ್ಯಾನ್ಸರ್ ಔಷಧಗಳ ಮೆಲಿನ ಟ್ಯಾಕ್ಸ್ ಇಳಿಕೆ
- ಮೊಬೈಲ್ ಮೇಲಿನ ತೆರಿಗೆ ಇಳಿಕೆ
- ಸ್ವದೇಶಿ ಬಟ್ಟೆಗಳ ಮೇಲಿನ ಟ್ಯಾಕ್ಸ್ ಇಳಿಕೆ
- ಚರ್ಮದ ಉತ್ಪನ್ನಗಳ ಮೇಲಿನ ತೆರಿಗೆ ಇಳಿಕೆ
- ಎಲೆಕ್ಟ್ರಿಕ್ ವಾಹನಗಳ ಮೇಲಿನ ಟ್ಯಾಕ್ಸ್ ಇಳಿಕೆ
- ಹೆಪ್ಪುಗಟ್ಟಿದ ಮೀನಿನ ವಹಿವಾಟಿನ ಮೇಲಿನ ಟ್ಯಾಕ್ಸ್ ಇಳಿಕೆ
- ಮೀನಿನ ಪ್ಲೇಟಿನ ಮೇಲಿನ ತೆರಿಗೆ ಇಳಿಕೆ
- 36 ಜೀವ ಉಳಿಸುವ ಔಷಧಗಳ ಮೇಲಿನ ಟ್ಯಾಕ್ಸ್ ಇಳಿಕೆ
- ನಿರ್ಣಾಯಕ 12 ಖನಿಜಗಳ ಮೇಲಿನ ಟ್ಯಾಕ್ಸ್ ಇಳಿಕೆ
- ಓಪನ್ ಸೆಲ್ ಮೇಲಿನ ತೆರಿಗೆ ಇಳಿಕೆ
- ತೇವಭರಿತ ನೀಲಿ ಚರ್ಮದ ಮೇಲಿನ ಕಸ್ಟಮ್ಸ್ ಸಂಪೂರ್ಣ ಇಳಿಕೆ
- ಎತರ್ನೆಟ್ ಸ್ವಿಚ್ ಮೇಲಿನ ತೆರಿಗೆ ಇಳಿಕೆ
- ದೋಣಿ, ಹಡಗು ತಯಾರಿಸಲು ಬಳಸುವ ಸಾಮಗ್ರಿಗಳ ಮೇಲಿನ ಕಸ್ಟಮ್ಸ್ ಮುಂದಿನ 10ವರ್ಷದ ವರೆಗೆ ವಿನಾಯತಿ
- ಝಿಂಕ್, ಲಿಥಿಯಮ್ ಬ್ಯಾಟರಿಯ ಸ್ಕ್ರ್ಯಾಪ್ ಮೇಲಿನ ಸುಂಕ ಇಳಿಕೆ
- ಮೊಬೈಲ್ ಫೋನ್ ತಯಾರಿಕೆಗೆ ಬಳಸುವ 28 ಸರಕುಗಳ ಮೇಲಿನ ಸುಂಕ ಇಳಿಕೆ
- ಇವಿ ಬ್ಯಾಟರಿಗಳ ಮೇಲಿನ ತೆರಿಗೆ ಇಳಿಕೆ
