UP : ಬಿಜೆಪಿ ಮರಳಿ ಅಧಿಕಾರಕ್ಕೆ ಬಂದರೆ ಲವ್ ಜಿಹಾದ್‍ಗೆ 10 ವರ್ಷ ಜೈಲು, 1 ಲಕ್ಷ ದಂಡ ಘೋಷಣೆ -Vishwanews24

Featured, ವಿಶೇಷ ಲೇಖನಗಳು

UP : ಬಿಜೆಪಿ ಮರಳಿ ಅಧಿಕಾರಕ್ಕೆ ಬಂದರೆ ಲವ್ ಜಿಹಾದ್‍ಗೆ 10 ವರ್ಷ ಜೈಲು, 1 ಲಕ್ಷ ದಂಡ ಘೋಷಣೆ -Vishwanews24

ಲಕ್ನೋ: ಉತ್ತರ ಪ್ರದೇಶದಲ್ಲಿ ಬಿಜೆಪಿ ಮರಳಿ ಅಧಿಕಾರಕ್ಕೆ ಬಂದರೆ ಲವ್ ಜಿಹಾದ್ ನಡೆಸುವವರಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂಪಾಯಿ ದಂಡವನ್ನು ವಿಧಿಸುವುದಾಗಿ ಘೋಷಿಸಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ನಿನ್ನೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಲೋಕ ಕಲ್ಯಾಣ ಸಂಕಲ್ಪ ಪತ್ರ-2022 ಹೆಸರಿನ ಈ ಪ್ರಣಾಳಿಕೆಯಲ್ಲಿ ಕಳೆದರ 2017ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಕಟಿಸಿದ್ದ 212 ಸಂಕಲ್ಪಗಳಲ್ಲಿ ಶೇ.92 ರಷ್ಟು ಈಡೇರಿಸುವುದಾಗಿ ಹೇಳಲಾಗಿದೆ.

ಅಧಿಕಾರಕ್ಕೆ ಮರಳಿದರೆ ಮುಂದಿನ ಐದು ವರ್ಷ ರೈತರ ನೀರಾವರಿ ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯತ್, 14 ದಿನದೊಳಗೆ ರೈತರಿಗೆ ಕಬ್ಬಿನ ಬಾಕಿ ಪಾವತಿಸಬೇಕು. ವಿದ್ಯಾರ್ಥಿನಿಯರಿಗೆ ಉಚಿತ ಸ್ಕೂಟರ್, 2 ಕೋಟಿ ಟ್ಯಾಬ್ಲೆಟ್ ಹಾಘೂ ಸ್ಮಾರ್ಟ್‍ಫೋನ್ ನೀಡಲಾಗುವುದು ಎಂದು ಭರವಸೆ ನೀಡಲಾಗಿದೆ.

ತೊಕ್ಕೊಟ್ಟು;- ನಡುರಾತ್ರಿ ಎಟಿಎಂನಿಂದ ದುಡ್ಡು ಕದಿಯಲು ಬಂದ ಭೂಪ- ಪೊಲೀಸ್ ಕಸ್ಟಡಿಗೆ: vishwanews24

 

Leave a Reply