VIDEO: ಕ್ರಿಕೆಟ್ ಆಡುವಾಗ ಖಾಸಗಿ ಅಂಗಕ್ಕೆ ತಾಗಿದ ಚೆಂಡು: 11 ವರ್ಷದ ಬಾಲಕ ಮೃತ್ಯು – Vishwanews24
VIDEO: ಕ್ರಿಕೆಟ್ ಆಡುವಾಗ ಖಾಸಗಿ ಅಂಗಕ್ಕೆ ತಾಗಿದ ಚೆಂಡು: 11 ವರ್ಷದ ಬಾಲಕ ಮೃತ್ಯು
ಕ್ರಿಕೆಟ್ ಆಡುವಾಗ ಖಾಸಗಿ ಅಂಗಕ್ಕೆ ಚೆಂಡು ಬಡಿದು ಬಾಲಕನೋರ್ವ ಮೃತಪಟ್ಟಿರುವ ದಾರುಣ ಘಟನೆ ಪುಣೆಯಲ್ಲಿ ನಡೆದಿದೆ. ಸ್ನೇಹಿತರೊಂದಿಗೆ ಕ್ರಿಕೆಟ್ ಆಡಲು ಹೋಗಿದ್ದ 11 ವರ್ಷದ ಶೌರ್ಯ ಮೃತಪಟ್ಟ ದುರ್ದೈವಿ. ಪುಣೆಯ ಲೋಹಗಾಂವ್ನಲ್ಲಿರುವ ಜಗದ್ಗುರು ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಗುರುವಾರ ರಾತ್ರಿ ಸ್ನೇಹಿತರೊಂದಿಗೆ ಶೌರ್ಯ ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ಬ್ಯಾಟ್ಸ್ಮನ್ ಬಾರಿಸಿದ ಚೆಂಡು ನೇರವಾಗಿ ಬೌಲಿಂಗ್ ಮಾಡುತ್ತಿದ್ದ ಶೌರ್ಯ ಅವರ ಖಾಸಗಿ ಭಾಗಕ್ಕೆ ಬಲವಾಗಿ ಬಡಿದಿದೆ.
ಚೆಂಡು ಬಡಿದ ರಭಸದಿಂದ ನಿತ್ರಾಣಗೊಂಡಿದ್ದ ಬಾಲಕ ಹೆಜ್ಜೆಯಿಡುತ್ತಲೇ ಕುಸಿದು ಬಿದ್ದಿದ್ದಾನೆ. ಈ ವೇಳೆ ಸ್ನೇಹಿತರು ಉಪಚರಿಸಿ ಎಚ್ಚರಿಸಲು ಪ್ರಯತ್ನಿಸಿದ್ದಾರೆ. ಆದರೆ ಶೌರ್ಯ ಕಡೆಯಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ.
VIDEO | In a shocking incident in #Pune, an 11-year-old boy died while playing cricket after a ball hit his private part.
The deceased has been identified as Shaurya Khadwe.
The incident happened in #Lohegaon on Thursday.https://t.co/0QTgGuCC6K pic.twitter.com/7F7vB3On6E
— Free Press Journal (@fpjindia) May 6, 2024
ಹೀಗಾಗಿ ಇತರರ ನೆರವಿನೊಂದಿಗೆ ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ದುರದೃಷ್ಟವಶಾತ್ ಅದಾಗಲೇ ತುಂಬಾ ತಡವಾಗಿತ್ತು. ಶೌರ್ಯ ಅವರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಲಾಗಿದ್ದು, ದೂರಿನಲ್ಲಿ ಹಠಾತ್ ಸಾವು ಎಂದು ತಿಳಿಸಲಾಗಿದೆ. ಅಲ್ಲದೆ ಮರಣೋತ್ತರ ಪರೀಕ್ಷೆಯ ಮೃತದೇಹವನ್ನು ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
