ಅ.25ರಂದು ಉಪಮುಖ್ಯಮಂತ್ರಿ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು : ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ ಸಿ.ಎನ್ ಅವರು ಅ.25ರಂದು ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.

ಅಕ್ಟೋಬರ್ 25 ರಂದು ಬೆಳಿಗ್ಗೆ 8.40ಕ್ಕೆ ವಿಮಾನನಿಲ್ದಾಣಕ್ಕೆ ಆಗಮನ, ನಂತರ ಉಡುಪಿಗೆ ತೆರಳುವರು. ಮಧ್ಯಾಹ್ನ 1 ಗಂಟೆಗೆ ಮಂಗಳೂರು  ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ, ಮಧ್ಯಾಹ್ನ 2.30 ಗಂಟೆಗೆ ರಿಸರ್ಚ್ ಆ್ಯಂಡ್ ವೈಐಟಿ ಟೀಮ್ (ಐಟಿಬಿಟಿ ಸ್ಕೀಮ್ಸ್‍ರವರೊಂದಿಗೆ ಚರ್ಚೆಯಲ್ಲಿ ಭಾಗವಹಿಸುವರು.

2.55 ಗಂಟೆಗೆ ರಾಬಿಂಗ್ ಸೆರಮನಿಯಲ್ಲಿ ಭಾಗವಹಿಸುವರು. ಮಧ್ಯಾಹ್ನ 3 ಗಂಟೆಗೆ ಕಾನ್ವಕೇಷನ್ ಸೆರಮನಿಯಲ್ಲಿ ಭಾಗವಹಿಸುವರು. ಸಂಜೆ 4.15 ಗಂಟೆಗೆ ಎಸಿಟಿಎಸ್‍ವೈಇಎನ್‍ಗೆ ಭೇಟಿ ನೀಡಿ ರಿಸರ್ಚ್ ಟೀಮ್‍ನೊಂದಿಗೆ ಚರ್ಚೆ ನಡೆಸಲಿದ್ದಾರೆ. ಸಂಜೆ 5.15 ಗಂಟೆಗೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಲಾಗಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ರಾತ್ರಿ 10.40 ಗಂಟೆಗೆ ಬೆಂಗಳೂರಿಗೆ ತೆರಳಲಿದ್ದಾರೆ.