ಅ.25ರೊಳಗೆ ತುಳು ಭಾಷೆ ರಾಜ್ಯ ಅಧಿಕೃತ ಭಾಷೆಯಾಗದಿದ್ದರೆ ನ.1ರಂದು ಉಡುಪಿ-ದ.ಕ ಜಿಲ್ಲೆ ಬಂದ್ : ತುಳು ಪರ ಹೋರಾಟಗಾರರ ಎಚ್ಚರಿಕೆ  – Vishwanews24

Featured, ಉಡುಪಿ, ದಕ್ಷಿಣ ಕನ್ನಡ

ಅ.25ರೊಳಗೆ ತುಳು ಭಾಷೆ ರಾಜ್ಯ ಅಧಿಕೃತ ಭಾಷೆಯಾಗದಿದ್ದರೆ ನ.1ರಂದು ಉಡುಪಿ-ದ.ಕ ಜಿಲ್ಲೆ ಬಂದ್ : ತುಳು ಪರ ಹೋರಾಟಗಾರರ ಎಚ್ಚರಿಕೆ 

ಮಂಗಳೂರು:ಅರ್ಟಿಕಲ್ 347ರ ಪ್ರಕಾರ ತುಳುಭಾಷೆಯನ್ನು ರಾಜ್ಯ ಅಧಿಕೃತ ಭಾಷೆಯನ್ನಾಗಿ ಅ.25ರೊಳಗೆ ಮಾಡದಿದ್ದಲ್ಲಿ ನವೆಂಬರ್ 1ರಂದು ಉಡುಪಿ, ದ.ಕ.ಜಿಲ್ಲಾ ಬಂದ್ ಮಾಡಲಾಗುವುದು ಎಂದು ತುಳು ಪರ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.

ತುಳು ಭಾಷೆಗೆಅಧಿಕೃತ ಸ್ಥಾನ ಮಾನ ನೀಡಲು ಸರ್ಕಾರವನ್ನು ಒತ್ತಾಯಿಸಲು ಮಂಗಳೂರಿನಲ್ಲಿ ಇಂದು ಸಮಾನ ಮನಸ್ಕ ಸಂಘಟನೆಗಳು, ತುಳು ಚಲನಚಿತ್ರ – ರಂಗಭೂಮಿ ಕಲಾವಿದ ಸಹಯೋಗದಲ್ಲಿ ಪ್ರತಿಭಟನೆ ನಡೆಯಿತು.

ತುಳುನಾಡಿಗೆ ಅನ್ಯಾಯ ಮಾಡಿದ ಯಾರನ್ನೂ ಇಷ್ಟರವರೆಗೆ ದೈವಗಳು ಬಿಟ್ಟಿಲ್ಲ. ತುಳುನಾಡಿನ ಜೀವನದಿ ನೇತ್ರಾವತಿ ನದಿ ತಿರುವು ಯೋಜನೆ ತಂದ ಸಂದರ್ಭ ಹೋರಾಟಗಾರರು ದೈವದ ಮುಂದೆ ಪ್ರಾರ್ಥಿಸಿದರು. ಈ ಯೋಜನೆ ತಂದ ಇಬ್ಬರು ರಾಜಕೀಯ ನಾಯಕರು ಈಗ ಮೂಲೆಗುಂಪಾಗಿದ್ದಾರೆ.

ಆರ್ಟಿಕಲ್ 347ರ ಪ್ರಕಾರ ತುಳುಭಾಷೆಯನ್ನು ರಾಜ್ಯ ಅಧಿಕೃತ ಭಾಷೆಯನ್ನಾಗಿ ಅ.25ರೊಳಗೆ ಮಾಡದಿದ್ದಲ್ಲಿ ತುಳುಭಾಷಿಗರು ಎಲ್ಲಾ ದೈವಸ್ಥಾನಗಳಿಗೆ ಹೋಗಿ ಸಚಿವರುಗಳನ್ನು ದೈವಗಳು ನೋಡಲೆಂದು ಪ್ರಾರ್ಥಿಸಬೇಕು.

ಮೂಡುಬಿದಿರೆ : ಕಂಬಳ ಕ್ಷೇತ್ರದ ಸಾಧಕ ಯಜಮಾನ, ಸರಳ ಸಜ್ಜನಿಕೆ ವ್ಯಕ್ತಿತ್ವದ ಇರುವೈಲು ಪಾಣಿಲ ಬಾಡ ಪೂಜಾರಿ ನಿಧನ – Vishwanews24

ಜೊತೆಗೆ ನವೆಂಬರ್ 1ಕ್ಕೆ ಉಡುಪಿ, ದ.ಕ.ಜಿಲ್ಲೆ ಬಂದ್ ಗೆ ಕರೆ ಕೊಡಬೇಕು ಎಂದು ತುಳುಪರ ಹೋರಾಟಗಾರ ಸುದರ್ಶನ ಸುರತ್ಕಲ್ ಖಡಕ್ ಎಚ್ಚರಿಕೆ ನೀಡಿದರು.

‘ಅಪ್ಪೆ ಬಾಸೆ ಪೊರುಂಬಾಟ ಕೂಟ ತುಳುನಾಡು’ ವತಿಯಿಂದ ಮಂಗಳೂರಿನ ಕ್ಲಾಕ್ ಟವರ್ ಮುಂಭಾಗದಲ್ಲಿ ‘ಅಪ್ಪೆ ಬಾಸೆ ಮಾನಾದಿಗೆಗ್ ಪ್ರತಿಭಟನೆ’ ನಡೆಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ತುಳು ರಂಗಭೂಮಿ ಹಾಗೂ ಸಿನಿಮಾ ನಿರ್ದೇಶಕ ವಿಜಯಕುಮಾರ್ ಕೊಡಿಯಾಲಬೈಲ್ ಮಾತನಾಡಿ, ಕನ್ನಡ ಹಾಗೂ ತುಳು ಭಾಷೆ ತುಳುಭಾಷಿಗರ ಎರಡು ಕಣ್ಣುಗಳಿದ್ದಂತೆ. ಯಾವತ್ತೂ ನಾವು ಕನ್ನಡವನ್ನು ನಿರ್ಲಕ್ಷ್ಯ ಮಾಡುವುದಿಲ್ಲ.

ನಮ್ಮ ನೆಲದಲ್ಲಿ ನಾವು ತುಳುವನ್ನೇ ಬಳಸುತ್ತೇವೆ. ಕರಾವಳಿಯಲ್ಲಿ ಕನ್ನಡವನ್ನು ಕಡ್ಡಾಯ ಮಾಡಲು ಹೊರಟಿರುವ ಸಚಿವ ಸುನಿಲ್ ಕುಮಾರ್ ಕಾರ್ಕಳದಲ್ಲಿ ಕನ್ನಡದಲ್ಲೇ ಮತಯಾಚನೆ ಮಾಡಿ ಗೆದ್ದು ಬರಲಿ. ಆಗ ನಾವು ಈ ತುಳು ಹೋರಾಟವನ್ನು ಕೈಬಿಡುತ್ತೇವೆ ಎಂದು ಸವಾಲೆಸೆದರು.

ಉಡುಪಿ: ಸಾಸ್ತಾನದ ನಿವಾಸಿ ಕುವೈಟ್ ನಲ್ಲಿ ಹೃದಯಾಘಾತದಿಂದ ನಿಧನ – Vishwanews24

ತುಳುಪರ ಹೋರಾಟಗಾರ ದಿಲ್ ರಾಜ್ ಆಳ್ವ ಮಾತನಾಡಿ, ತುಳುಭಾಷೆಯ ಉಳಿವಿಗೆ ಯಾವುದೇ ರೀತಿಯಲ್ಲಿ ಕೊಡುಗೆಯನ್ನು ಕೊಡದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಗೆ ಮೊದಲಾಗಿ ಬೀಗ ಜಡಿಯಬೇಕು. ತುಳು 8ನೇ ಪರಿಚ್ಛೇದಕ್ಕೆ ಸೇರ್ಪಡೆಯಾಗಲು ತಾಂತ್ರಿಕ ದೋಷ ಇದೆ ಎಂದು ಜನಪ್ರತಿನಿಧಿಗಳು ಹೇಳುತ್ತಿದ್ದರು‌.

ಆದರೆ ಈವರೆಗೆ ಅದು ಸರಿಯಾಗಲೇ ಇಲ್ಲ. ಇಂದು ಸಚಿವ ಸುನಿಲ್ ಕುಮಾರ್ ಕರ್ನಾಟಕದಲ್ಲಿ ತುಳು ಮಾತನಾಡಲೇ ಬಾರದು ಕನ್ನಡವನ್ನೇ ಬಳಸಬೇಕೆಂದು ಹೇಳುತ್ತಿದ್ದಾರೆ. ಈ ಮೂಲಕ ತುಳುವರನ್ನು ಕನ್ನಡಕ್ಕೆ ಮತಾಂತರ ಮಾಡುತ್ತಿದ್ದಾರೆ‌. ಆದ್ದರಿಂದ ತುಳು ಭಾಷೆಯನ್ನು ಅಧಿಕೃತ ಭಾಷೆ ಆಗುವವರೆಗೆ ನಾವು ಹೋರಾಟ ಕೈಬಿಡೋಲ್ಲ ಎಂದು ಹೇಳಿದರು.

ಈ ಸಂದರ್ಭ ತುಳುಚಿತ್ರರಂಗ, ರಂಗಭೂಮಿ ನಟರು, ತುಳುಪರ ಹೋರಾಟಗಾರರು, ತುಳುಪರ ಹೋರಾಟಗಾರ ದಿಲ್ ರಾಜ್ ಆಳ್ವ, ನಟ ವಿನಿತ್, ತುಳು ರಂಗಭೂಮಿ ಹಾಗೂ ಸಿನಿಮಾ ನಿರ್ದೇಶಕ ವಿಜಯಕುಮಾರ್ ಕೊಡಿಯಾಲಬೈಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply