ಅ.4ರಿಂದ ಬೆಂಗಳೂರು – ಮಂಗಳೂರು ನಡುವಿನ ಹಲವು ರೈಲುಗಳ ಸಂಚಾರ ರದ್ದು – vishwanews24

Featured, ಉಡುಪಿ, ದಕ್ಷಿಣ ಕನ್ನಡ, ರಾಜ್ಯ ನ್ಯೂಸ್

ಹಳಿ ನಿರ್ವಹಣೆ: ಅ.4ರಿಂದ ಬೆಂಗಳೂರು – ಮಂಗಳೂರು ನಡುವಿನ ಹಲವು ರೈಲುಗಳ ಸಂಚಾರ ರದ್ದು

ಮಂಗಳೂರು: ಶಿರಿಬಾಗಿಲು- ಯಡಕುಮೇರಿ ರೈಲು ನಿಲ್ದಾಣಗಳ ನಡುವೆ ಕಾಮಗಾರಿಗಳಿಗಾಗಿ ಲೈನ್ ಬ್ಲಾಕ್ ಇರುವುದರಿಂದ ಬೆಂಗಳೂರು – ಮಂಗಳೂರು ನಡುವೆ ಹಲವು ರೈಲುಗಳ ಸಂಚಾರ ರದ್ದುಗೊಳಿಸಲಾಗುತ್ತದೆ.

ವಾರದಲ್ಲಿ ಮೂರು ದಿನ ಸಂಚರಿಸುವ ಯಶವಂತಪುರ – ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ (ಸಂಖ್ಯೆ 16575) ರೈಲು ಅ.4, 6, 8, 11,13,15, 22, 25, 27, 29 ಮತ್ತು ನ.1, 3ರಂದು ಸಂಚರಿಸುವುದಿಲ್ಲ. ಮಂಗಳೂರು ಜಂಕ್ಷನ್ – ಯಶವಂತಪುರ ಎಕ್ಸ್‌ಪ್ರೆಸ್ (ಸಂಖ್ಯೆ 16576 ) ರೈಲು ಅ. 5, 7, 9, 12, 14, 16, 23, 26, 28, 30 ಮತ್ತು ನ.2, 4 ರಂದು ಸಂಚರಿಸುವುದಿಲ್ಲ.

ಇದನ್ನೂ ಓದಿ :

ಮುಂಬೈ ಭೂಕುಸಿತ: ಇಬ್ಬರು ಬಲಿ, ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ – vishwanews24

ವಾರದಲ್ಲಿ ಮೂರು ದಿನ ಸಂಚರಿಸುವ ಯಶವಂತಪುರ – ಕಾರವಾರ ಎಕ್ಸ್‌ಪ್ರೆಸ್ ( ಸಂಖ್ಯೆ 16515) ರೈಲಿನ ಸಂಚಾರ ಅ.5, 7, 9, 12, 14, 21, 23, 26, 28, 30, ನ.2ರಂದು ರದ್ದುಪಡಿಸಲಾಗಿದೆ.

ಕಾರವಾರ -ಯಶವಂತಪುರ ಎಕ್ಸ್‌ಪ್ರೆಸ್ (ಸಂಖ್ಯೆ 16516 ) ರೈಲು ಅ. 6, 8, 10, 13, 15, 22, 24, 27, 29, 31 ಮತ್ತು ನ. 3ರಂದು ಸಂಚರಿಸುವುದಿಲ್ಲ.

ಯಶವಂತಪುರ – ಮಂಗಳೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್‌ಪ್ರೆಸ್ (ಸಂಖ್ಯೆ 16539 ) ರೈಲು ಸಂಚಾರ ಅ.10, 24, 31ರಂದು ರದ್ದುಗೊಳ್ಳಲಿದೆ. ಮಂಗಳೂರು ಜಂಕ್ಷನ್-ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ (ಸಂಖ್ಯೆ 16540) ರೈಲು ಸಂಚಾರ ಅ. 11, 25, ಮತ್ತು ನ.1ರಂದು ರದ್ದುಗೊಳ್ಳಲಿದೆ ಎಂದು ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ :

ಪ್ರಜ್ವಲ್ ರೇವಣ್ಣ ಸೆಲ್‌ನಲ್ಲಿ ಮೊಬೈಲ್ ಪತ್ತೆ : ಜೈಲಾಧಿಕಾರಿ ಸಸ್ಪೆಂಡ್, SPಗೆ ಶೋಕಾಸ್ ನೋಟಿಸ್ – vishwanews24

ಪ್ರಯಾಣಿಕರಿಗೆ ಮುನ್ನೆಚ್ಚರಿಕೆ: ಶಿರಿಬಾಗಿಲು–ಎಡಕುಮಾರಿ ನಡುವಿನ ಹಳಿ ನಿರ್ವಹಣೆ ಹಾಗೂ ಎಂಜಿನಿಯರಿಂಗ್ ಕಾಮಗಾರಿಗಳ ಹಿನ್ನೆಲೆ ಈ ಸಂಚಾರ ಬದಲಾವಣೆ ಮಾಡಲಾಗಿದೆ. ಹೀಗಾಗಿ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಈ ರೈಲುಗಳಲ್ಲಿ ಪ್ರಯಾಣಿಸಲು ಯೋಜಿಸಿರುವ ಪ್ರಯಾಣಿಕರು ತಮ್ಮ ಪ್ರಯಾಣದ ದಿನಾಂಕಕ್ಕೆ ಅನುಗುಣವಾಗಿ ರೈಲು ಸಂಚಾರದ ಸ್ಥಿತಿಯನ್ನು ಮುಂಚಿತವಾಗಿ ಪರಿಶೀಲಿಸಿ ಪ್ರಯಾಣ ಯೋಜನೆ ರೂಪಿಸಬೇಕಾಗಿದೆ. ಹಳಿ ನಿರ್ವಹಣೆ ಮತ್ತು ಎಂಜಿನಿಯರಿಂಗ್ ಕಾಮಗಾರಿಗಳು ಪೂರ್ಣಗೊಂಡ ಬಳಿಕ ರೈಲುಗಳ ಸಂಚಾರ ಎಂದಿನಂತೆ ಮುಂದುವರಿಯಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

Leave a Reply