ಅಂಗನವಾಡಿಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್‌ಕೆಜಿ, ಯುಕೆಜಿ ಪರಿಚಯಿಸಲು ಯೋಜನೆ  : ಬಿ ಸಿ ನಾಗೇಶ್‌‌‌ – Vishwanews24

Featured, ರಾಜ್ಯ ನ್ಯೂಸ್

ಅಂಗನವಾಡಿಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್‌ಕೆಜಿ, ಯುಕೆಜಿ ಪರಿಚಯಿಸಲು ಯೋಜನೆ  : ಬಿ ಸಿ ನಾಗೇಶ್‌‌‌ – Vishwanews24

ಬೆಳಗಾವಿ : “ಅಂಗನವಾಡಿಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್‌ಕೆಜಿ, ಯುಕೆಜಿ ಪರಿಚಯಿಸಲು ಯೋಜನೆ ಮಾಡಿದ್ದೇವೆ” ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್‌‌‌ ತಿಳಿಸಿದ್ದಾರೆ.

ಈ ಬಗ್ಗೆ ವಿಧಾನಸಭೆಯಲ್ಲಿ ಮಾಹಿತಿ ನೀಡಿದ ಅವರು, “ಅಂಗನವಾಡಿಯಲ್ಲಿ ಎಲ್‌ಕೆಜಿ, ಯುಕೆಜಿ ಪರಿಚಯಿಸಲು ಯೋಜನೆ ಮಾಡಿದ್ದೇವೆ. ಅಲ್ಲಿರುವ ಸಿಬ್ಬಂದಿಗೆ ತರಬೇತಿ ನೀಡಿ ಬಳಸಿಕೊಳ್ಳಲಾಗುವುದು” ಎಂದಿದ್ದಾರೆ.

“ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಹಂತ ಹಂತವಾಗಿ ಎನ್‌‌ಇಪಿ ಜಾರಿ ಮಾಡಲಾಗುತ್ತದೆ. 26 ಪೊಸಿಶನ್‌ ಪೇಪರ್‌‌ ಸಲ್ಲಿಕೆಯಾಗುತ್ತಿದೆ. ತಜ್ಞರ ತಂಡ ರಚಿಸಿದ್ದು, 3-4 ಸಭೆಗಳು ನಡೆದಿವೆ” ಎಂದು ಮಾಹಿತಿ ನೀಡಿದ್ದಾರೆ.

ಹೆಣ್ಣುಮಕ್ಕಳ ಬಗ್ಗೆ ನನಗೆ ಗೌರವವಿದೆ, ನನ್ನ ಮಾತುಗಳಿಂದ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ:  ಸದನದಲ್ಲಿ ಕ್ಷಮೆಯಾಚಿಸಿದ  ರಮೇಶ್ ಕುಮಾರ್