ಅಕ್ಟೋಬರ್ನಲ್ಲಿ ಮಂಗಳೂರು – ಕುವೈಟ್ ನೇರ ವಿಮಾನ ಆರಂಭ -vishwanews24
ಅಕ್ಟೋಬರ್ನಲ್ಲಿ ಮಂಗಳೂರು – ಕುವೈಟ್ ನೇರ ವಿಮಾನ ಆರಂಭ
ಮಂಗಳೂರು: ಯುದ್ಧದಿಂದಾಗಿ 6 ತಿಂಗಳಿನಿಂದ ಸ್ಥಗಿತಗೊಂಡಿದ್ದ ಮಂಗಳೂರು- ಕುವೈಟ್ ನೇರ ವಿಮಾನ ಸಂಚಾರ ಪುನರಾರಂಭಗೊಳ್ಳುವ ಸೂಚನೆ ಇದೆ.
ಚಳಿಗಾಲದ ವೇಳಾಪಟ್ಟಿಯಂತೆ ಅಕ್ಟೋಬರ್ ಕೊನೆ ವಾರ ಮಂಗಳೂರು-ಕುವೈಟ್ ಮಧ್ಯೆ ನೇರ ವಿಮಾನ ಆರಂಭಿಸುವುದಕ್ಕೆ ಏರ್ಇಂಡಿಯಾ ಎಕ್ಸ್ಪ್ರೆಸ್ ಮುಂದಾಗಿರುವುದಾಗಿ ತಿಳಿದುಬಂದಿದೆ.
ಲಭ್ಯ ಮಾಹಿತಿಯಂತೆ ಅ. 27ರಿಂದ ವಾರಕ್ಕೆ ಮೂರು ಬಾರಿ ಎಂದರೆ ಮಂಗಳವಾರ, ಶುಕ್ರವಾರ, ಶನಿವಾರ ಏರ್ಇಂಡಿಯಾ ಎಕ್ಸ್ಪ್ರೆಸ್ ಮಂಗಳೂರು-ಕುವೈಟ್ ಮಧ್ಯೆ ಕಾರ್ಯಾಚರಿಸಲಿದೆ.
ಇರಾನ್-ಇಸ್ರೇಲ್, ಅಮೆರಿಕ ಯುದ್ದ ಆರಂಭಗೊಂಡ ಬಳಿಕ (ಫೆ. 28) ಗಲ್ಫ್ ರಾಷ್ಟ್ರಗಳ ವಿಮಾನ ಸಂಪರ್ಕ ಬಹುತೇಕ ಸ್ಥಗಿತಗೊಂಡಿತ್ತು. ಆದರೆ ಯುದ್ದದ ತೀವ್ರತೆ ಕಡಿಮೆಯಾಗುತ್ತಿದ್ದಂತೆ ಬಹುತೇಕ ರಾಷ್ಟ್ರಗಳಿಗೆ ವಿಮಾನಯಾನ ಪುನರಾರಂಭಗೊಂಡಿತ್ತು. ಆದರೆ ಕುವೈಟ್ ವಿಮಾನ ಮಾತ್ರ ಮತ್ತೆ ಯಾನ ಆರಂಭಿಸಿಲ್ಲ. ಯುದ್ಧದ ಮೊದಲು ವಾರಕ್ಕೆ 3 ಏರ್ಇಂಡಿಯಾ ಎಕ್ಸ್ಪ್ರೆಸ್ ವಿಮಾನಗಳು ಕುವೈಟ್-ಮಂಗಳೂರು ನಡುವೆ ಯಾನ ನಡೆಸುತ್ತಿದ್ದವು.
ಯುದ್ಧದ ಸಂದರ್ಭದಲ್ಲಿ ಕ್ಷಿಪಣಿ ದಾಳಿಗೆ ತುತ್ತಾಗಿ ಕುವೈಟ್ ವಿಮಾನ ನಿಲ್ದಾಣ ಹಾನಿಗೊಂಡಿತ್ತು. ಅದನ್ನು ಸರಿಪಡಿಸಲಾಯಿತಾದರೂ ತೀರಾ ಇತ್ತೀಚೆಗಿನ ವರೆಗೂ ಜಝೀರಾ ಏರ್ಲೈನ್ಸ್ ಹಾಗೂ ಕುವೈಟ್ ಏರ್ವೆàಸ್ ಮಾತ್ರವೇ ಕಾರ್ಯಾಚರಿಸುತ್ತಿದ್ದವು. ವಿದೇಶಿ ವಿಮಾನಗಳು ನಿಧಾನವಾಗಿ ಆರಂಭವಾಗುತ್ತಿವೆ.
