ಅಕ್ರಮವಾಗಿ ಗೋವು ಸಾಗಿಸುತ್ತಿದ್ದವರನ್ನು ಹಗ್ಗದಿಂದ ಕಟ್ಟಿ `ಗೋಮಾತೆಗೆ ಜೈ’ ಘೋಷಣೆ ಹೇಳಿಸಿದ ಗ್ರಾಮಸ್ಥರು -Vishwanews24

Featured, ರಾಷ್ಟ್ರ ನ್ಯೂಸ್

ಖಂಡ್ವಾ :ಅಕ್ರಮವಾಗಿ ಗೋವು ಸಾಗಿಸುತ್ತಿದ್ದರೆನ್ನಲಾದ 20 ಕ್ಕೂ ಹೆಚ್ಚು ಜನರನ್ನು ಗ್ರಾಮಸ್ಥರೇ ಹಿಡಿದು,ಹಗ್ಗದಿಂದ ಕಟ್ಟಿ ಗೋಮಾತೆಗೆ ಜೈ ಎಂದು ಘೋಷಣೆ ಹೇಳಿಸಿರುವ ಘಟನೆ ಮಧ್ಯಪ್ರದೇಶದ ಖಂಡ್ವಾ ಜಿಲ್ಲೆಯಲ್ಲಿ ನಡೆದಿದೆ.

ಸನ್ವಾಲಿಖೆಡ ಗ್ರಾಮಸ್ಥರು ವಾಹನದಲ್ಲಿ ಜಾನುವಾರು ಸಾಗಿಸುತ್ತಿದ್ದರು ಎನ್ನಲಾದ 20 ಕ್ಕೂ ಹೆಚ್ಚು ಜನರನ್ನು ತಡೆದು, ಅವರನ್ನು ಹಗ್ಗದಲ್ಲಿ ಕಟ್ಟಿ, ಅವರಿಂದ ಗೋಮಾತೆಗೆ ಜೈ ಎಂದು ಘೋಷಣೆ ಹೇಳಿಸಿದ್ದಾರೆ.

ಸೋಶಿಯಲ್ ಮಿಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಗ್ರಾಮಸ್ಥರು ಮತ್ತು ಗೋವು ಸಾಗಿಸುತ್ತಿದ್ದವರ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.