‘ಅಡಿಕೆ’ ಬೆಳೆಗಾರರಿಗೆ ಗುಡ್ ನ್ಯೂಸ್ : ಆಮದು ದರ 100 ರೂ.ಹೆಚ್ಚಿಸಿದ ಕೇಂದ್ರ ಸರ್ಕಾರ – Vishwanews24
‘ಅಡಿಕೆ’ ಬೆಳೆಗಾರರಿಗೆ ಗುಡ್ ನ್ಯೂಸ್ : ಆಮದು ದರ 100 ರೂ.ಹೆಚ್ಚಿಸಿದ ಕೇಂದ್ರ ಸರ್ಕಾರ
ಬೆಂಗಳೂರು : ಎಲೆಚುಕ್ಕೆ ರೋಗದ ಆತಂಕದಲ್ಲಿರುವ ರಾಜ್ಯದ ಜನತೆಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಅಡಿಕೆಯ ಕನಿಷ್ಟ ಆಮದು ಬೆಲೆಯನ್ನು 351 ರೂ ಗೆ ಹೆಚ್ಚಳ ಮಾಡಿದೆ.
ಸದ್ಯ, ಅಡಿಕೆ ಮೇಲಿನ ಕನಿಷ್ಟ ಆಮದು ಬೆಲೆಯು 251 ರೂಗಳಾಗಿತ್ತು.
ಇದೀಗ 100 ರೂ. ಏರಿಕೆ ಮಾಡಲಾಗಿದೆ. ಅಲ್ಲದೇ ಸುಪಾರಿ ಹೆಸರಿನಲ್ಲಿ ಆಮದು ಮಾಡಿಕೊಳ್ಳುವ ಅಡಿಕೆಯ ಆಮದು ಬೆಲೆಯೂ ಹೆಚ್ಚಿದೆ.
ಹೊರ ದೇಶಗಳಿಂದ ಆಗುತ್ತಿದ್ದ ಆಮದು ದರವನ್ನು ₹100 ಹೆಚ್ಚಿಸಿದೆ. ಈವರೆಗೆ ಕನಿಷ್ಠ ಆಮದು ದರ ₹251 ಇದ್ದರೆ ಇನ್ನು ಮುಂದೆ ₹351 ಕ್ಕಿಂತ ಹೆಚ್ಚಿನ ಬೆಲೆಯನ್ನು ಕೊಡುವ ಮೂಲಕ ಆಮದು ಮಾಡಿಕೊಳ್ಳಬೇಕಿದೆ. ಈ ಬಗ್ಗೆ ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ಅವರು ಟ್ವಿಟ್ ಮಾಡಿ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿ, ಟ್ವಿಟ್ ಮಾಡಿದ್ದಾರೆ. ಇದೇ ವೇಳೆ ಅವರು ಅಡಿಕೆ ಬೆಳೆಗಾರರ ಹಿತ ಕಾಯುವ ಕೇಂದ್ರದ ಈ ನಿರ್ಧಾರಕ್ಕಾಗಿ ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿಯವರಿಗೆ ಹೃತ್ಪೂರ್ವಕವಾದ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಅಂಥ ತಿಳಿಸಿದ್ದಾರೆ.
ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರ ಸರ್ಕಾರವು ಅಡಿಕೆ ಬೆಳೆಗಾರರ ಹಿತವನ್ನು ಕಾಯಲು ಬದ್ಧವಾಗಿದೆ.
ಹೊರ ದೇಶಗಳಿಂದ ಆಗುತ್ತಿದ್ದ ಆಮದು ದರವನ್ನು ₹100 ಹೆಚ್ಚಿಸಿದೆ. ಈವರೆಗೆ ಕನಿಷ್ಠ ಆಮದು ದರ ₹251 ಇದ್ದರೆ ಇನ್ನು ಮುಂದೆ ₹351 ಕ್ಕಿಂತ ಹೆಚ್ಚಿನ ಬೆಲೆಯನ್ನು ಕೊಡುವ ಮೂಲಕ ಆಮದು ಮಾಡಿಕೊಳ್ಳಬೇಕಿದೆ.@BSYBJP @BSBommai @BJP4Karnataka pic.twitter.com/mshkITcYTP
— B Y Raghavendra (@BYRBJP) February 15, 2023
ಹಿಂದಿನ ₹251 ಕನಿಷ್ಠ ಆಮದು ದರವನ್ನು ₹100 ಗಳಿಂದ, ₹351ಕ್ಕೆ ಹೆಚ್ಚಿಸಿದೆ. ಇನ್ನು ಮುಂದೆ ಯಾವುದೇ ದೇಶದಿಂದ ಅಡಿಕೆ ಆಮದು ಮಾಡಿದರೂ ₹351 ಕ್ಕಿಂತ ಹೆಚ್ಚಿನ ಬೆಲೆ ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬದ್ಧವಾಗಿದೆ. ಹೊರದೇಶದಿಂದ ಕಡಿಮೆ ಬೆಲೆಗೆ ಆಮದಾಗುತ್ತಿರುವ ಅಡಿಕೆ ರಾಜ್ಯದ ಬೆಳೆಗಾರಿಗೆ ಶಾಪವಾಗಿ ಪರಿಣಾಮಿಸಿತ್ತು.
ಉಡುಪಿ: ಪ್ರಾಣಿಗಳ ಕಳೇಬರ ವಿಲೇವಾರಿಗೆ ಮೊಬೈಲ್ ಚಿತಾಗಾರ ವ್ಯವಸ್ಥೆ : ಜಿಲ್ಲಾಧಿಕಾರಿ – Vishwanews24
