ಅಣ್ಣ ರಾಮುಲು ಇರುವ ಕಡೆ ತಮ್ಮ ಲಕ್ಷ್ಮಣನಿಗೆ ಯಾವ ತೊಂದರೆ ಇಲ್ಲ ,ನಮ್ಮೆಲ್ಲರ ಉದ್ದೇಶ ಇಡೀ ರಾಜ್ಯದ ಅಭಿವೃದ್ಧಿ : ಲಕ್ಷ್ಮಣ್ ಸವದಿ -Vishwanews24
ಬಳ್ಳಾರಿ : ಜಿಲ್ಲಾ ಉಸ್ತುವಾರಿ ವಿಚಾರದಲ್ಲಿ ಯಾರಿಗೂ ಅಸಮಾಧಾನವಿಲ್ಲ. ನಾನು ಶ್ರೀರಾಮುಲು ಜತೆ ಮಾತಾಡಿದ್ದೇನೆ. ಅವರು ಸಂತೋಷವಾಗಿ ಬಳ್ಳಾರಿಗೆ ಆಹ್ವಾನ ನೀಡಿದ್ದಾರೆ. ಅಣ್ಣ ರಾಮುಲು ಇರುವ ಕಡೆ ತಮ್ಮ ಲಕ್ಷ್ಮಣನಿಗೆ ಯಾವ ತೊಂದರೆ ಇಲ್ಲ. ನಮ್ಮೆಲ್ಲರ ಉದ್ದೇಶ ಇಡೀ ರಾಜ್ಯದ ಅಭಿವೃದ್ಧಿ. ಎಲ್ಲರ ಸಹಕಾರದೊಂದಿಗೆ ಬಳ್ಳಾರಿ ಮಾದರಿ ಜಿಲ್ಲೆಯಾಗಿಸಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಹೇಳಿದ್ದಾರೆ.
ಬಳ್ಳಾರಿಯಲ್ಲಿಂದು ಕಲ್ಯಾಣ ಕರ್ನಾಟಕ ಧ್ವಜಾರೋಣ ಕಾರ್ಯಕ್ರಮವನ್ನು ಬಳ್ಳಾರಿಯಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ನೆರವೇರಿಸಿದರೇ, ಯಾದಗಿರಿಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ನೆರವೇರಿಸಿದ್ದಾರೆ. ಇದೇ ವಿಚಾರವಾಗಿ, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸ್ಥಾನ ಕೈ ತಪ್ಪಿದ್ದಕ್ಕಾಗಿ ಶ್ರೀರಾಮುಲು ಅಸಮಾಧಾನಗೊಂಡಿದ್ದಾರೆ ಎನ್ನಲಾಗುತ್ತಿತ್ತು.
ಈ ಕುರಿತಂತೆ ಸ್ಪಷ್ಟ ಪಡಿಸಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ, ಶ್ರೀರಾಮುಲು ನಾನು ಅಣ್ಣ ತಮ್ಮಂದಿರಿದ್ದಂತೆ. ನಮ್ಮ ನಡುವೆ ಯಾವುದೇ ಮನಸ್ಥಾಪವಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಕೈ ತಪ್ಪಿದ್ದಕ್ಕಾಗಿ ಶ್ರೀರಾಮುಲು ಅವರಿಗೆ ಬೇಸರವೂ ಇಲ್ಲ. ನಮ್ಮ ಉದ್ದೇಶ ರಾಜ್ಯದ ಅಭಿವೃದ್ಧಿ. ಜಿಲ್ಲೆಯನ್ನು ಎಲ್ಲರ ಸಹಕಾರದೊಂದಿಗೆ ಮಾದರಿ ಜಿಲ್ಲೆಯಾಗಿ ಮಾಡಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದು ತಿಳಿಸಿದ್ದಾರೆ.
