ಅತೃಪ್ತ ಶಾಸಕರು ವಾಪಸ್ ಬಂದು ಮೈತ್ರಿ ಸರ್ಕಾರ ಉಳಿಸಿದರೆ ಎಚ್.ಡಿ ರೇವಣ್ಣ ಅವರಿಂದ ರಾಜಿನಾಮೆ ಕೊಡಿಸುವೆ : ಜೆಡಿಎಸ್ ಶಾಸಕ ಎ.ಟಿ ರಾಮಸ್ವಾಮಿ -Vishwanews24
ಸೋಮವಾರ ಹೊಳೆನರಸಿಪುರದಲ್ಲಿ ಮಾತನಾಡಿದ ರಾಮಸ್ವಾಮಿ ರಾಜ್ಯ ರಾಜಕಾರಣದ ಈ ಸ್ಥಿತಿಗೆ ಎಚ್.ಡಿ. ರೇವಣ್ಣ ಅವರೇ ಕಾರಣರಾಗಿದ್ದು ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದಲ್ಲಿ ನಾವೆಲ್ಲಾ ವಾಪಸ್ ಬರುತ್ತೇವೆ ಎಂದು ಅತೃಪ್ತ ಶಾಸಕರು ಒಂದು ಹೇಳಿಕೆ ನೀಡಲಿ. ನಾನೇ ಖುದ್ದಾಗಿ ಸಚಿವ ರೇವಣ್ಣ ಅವರ ರಾಜೀನಾಮೆಗೆ ಮನವೊಲಿಸುತ್ತೇನೆ ಎಂದು ಭರವಸೆ ವ್ಯಕ್ತ ಪಡಿಸಿದ್ದಾರೆ.
ಮೈತ್ರಿ ಸರ್ಕಾರದಲ್ಲಿ ನ್ಯೂನತೆಗಳು ಮತ್ತು ಸಣ್ಣಪುಟ್ಟ ಅಸಮಾಧಾನಗಳು ಇಲ್ಲವೆಂದಲ್ಲ. ಆದರೆ ರಾಜಕೀಯ ವರಿಷ್ಠರ ಜೊತೆಗಿರುವ ಹೊಗಳುಭಟ್ಟ ಶಾಸಕರಿಂದಲೇ ಇಂದು ರಾಜ್ಯ ರಾಜಕಾರಣ ಈ ಸ್ಥಿತಿಗೆ ಬಂದಿದೆ ಎಂದರು.

