ಅತ್ಯಾಚಾರ ಆರೋಪಿಗಳ ಪರವಾಗಿ ಯಾವ ವಕೀಲರು ವಾದ ಮಾಡಬಾರದು : ರಮಾನಾಥ ರೈ -Vishwanews24

Featured, ದಕ್ಷಿಣ ಕನ್ನಡ

ಬಂಟ್ವಾಳ: ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಕಾಂಗ್ರೆಸ್‌ ವತಿಯಿಂದ ಬಿ.ಸಿ.ರೋಡಿನ ರಕ್ತೇಶ್ವರಿ ದೇವಸ್ಥಾನದ ಮುಂಭಾಗ ಪ್ರತಿಭಟನೆ ನಡೆದಿದೆ.

ಈ ವೇಳೆ ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ ರೈ, ಕಾಲೇಜು ವಿದ್ಯಾರ್ಥಿನಿಯನ್ನು ಸಹಪಾಠಿಗಳೇ ಅತ್ಯಾಚಾರ ಮಾಡಿರುವುದು ಖಂಡನೀಯ. ಪ್ರತಿಬಾರಿ ಮಹಿಳೆಯರ ಮೇಲೆ ದೌರ್ಜನ್ಯಗಳಾದಾಗ ಧರ್ಮದ ಹೆಸರಿನಲ್ಲಿ ಪ್ರತಿಭಟನೆ ಮಾಡುತ್ತಿದ್ದ ಸಂಘಟನೆಗಳು ಮೌನವಾಗಿರುವುದು ಹಲವಾರು ಸಂದೇಹಕ್ಕೆ ಎಡೆಮಾಡಿ ಕೊಟ್ಟಿದೆ ಎಂದು ಹೇಳಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಇಲಾಖೆ ಯಾವುದೇ ಒತ್ತಡಕ್ಕೆ ಮಣಿಯಬಾರದು. ಅತ್ಯಾಚಾರ ಆರೋಪಿಗಳ ಪರವಾಗಿ ಯಾವ ವಕೀಲರು ವಾದ ಮಾಡದಂತೆ ರಮಾನಾಥ ರೈ ಮನವಿ ಮಾಡಿದ್ದಾರೆ.

ಈ ವೇಳೆ ಬೇಬಿ ಕುಂದರ್‌, ಸುದೀಪ್‌ ಕುಮಾರ್‌ ಶೆಟ್ಟಿ, ಚಂದ್ರಪ್ರಕಾಶ್‌ ಶೆಟ್ಟಿ, ಪದ್ಮಶೇಖರ ಜೈನ್‌, ಎಂ.ಎಸ್‌. ಮಹಮ್ಮದ್‌, ರಾಜಶೇಖರ ನಾಯಕ್‌, ಐಡಾ ಸುರೇಶ್‌, ಜಯಂತಿ ಪೂಜಾರಿ, ಮಲ್ಲಿಕಾ ಶೆಟ್ಟಿ, ಲುಕ್ಮಾನ್‌, ಮಹಮ್ಮದ್‌ ನಂದರಬೆಟ್ಟು, ಸಂಜೀವ ಪೂಜಾರಿ, ಸಿದ್ದೀಕ್‌ ಗುಡ್ಡೆಯಂಗಡಿ, ಪ್ರಶಾಂತ್‌ ಕುಲಾಲ್‌ ಮೊದಲಾದವವರು ಭಾಗಿಯಾಗಿದ್ದರು.