ಅತ್ಯಾಚಾರ ಪ್ರಕರಣ : ಬಿಜೆಪಿ ಶಾಸಕ ಮುನಿರತ್ನ ಮತ್ತೆ ಅರೆಸ್ಟ್ – vishwanews24
ಅತ್ಯಾಚಾರ ಆರೋಪ ಪ್ರಕರಣ : ಬಿಜೆಪಿ ಶಾಸಕ ಮುನಿರತ್ನ ಮತ್ತೆ ಅರೆಸ್ಟ್
ಬೆಂಗಳೂರು: ಜಾತಿನಿಂದನೆ ಪ್ರಕರಣದಲ್ಲಿ ಜಾಮೀನು ಪಡೆದುಕೊಂಡಿದ್ದ ಆರ್.ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ಕಗ್ಗಲಿಪುರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಕೊರೊನಾ ಸಮಯದಲ್ಲಿ ನನ್ನ ಸೇವೆ ಗುರುತಿಸಿ ಕರೆ ಮಾಡಿದ್ದ ಮುನಿರತ್ನ ನಾಯ್ಡು, ನನ್ನನ್ನು ಬಂದು ಭೇಟಿ ಮಾಡಿ ಅಂತಾ ಹೇಳಿದ್ದರು ಎಂದು ದೂರು ದಾಖಲು ಮಾಡಿದ್ದರು.
ಇನ್ನು ಅವರ ಭೇಟಿ ಬಳಿಕ ಇಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು. ನನ್ನನ್ನು ಬೆದರಿಸಿ 2020ರಿಂದ 2022ರವರೆಗೆ ನಿರಂತವಾಗಿ ಅತ್ಯಾಚಾರ ಮಾಡಿದ್ದಾರೆ. ಅತ್ಯಾಚಾರದ ವಿಡಿಯೋ ಇಟ್ಟುಕೊಂಡು ಹನಿಟ್ರ್ಯಾಪ್‌ಗೂ ಬಳಕೆ ಮಾಡಿಕೊಂಡಿದ್ದಾರೆ ಎಂದು ಸಂತ್ರಸ್ತೆ ಹೇಳಿಕೆ ನೀಡಿದ್ದರು.
ಕೋಟ ಶ್ರೀನಿವಾಸ್ ಪೂಜಾರಿ ರಾಜೀನಾಮೆಯಿಂದ ತೆರವಾದ ಎಂಎಲ್ಸಿ ಸ್ಥಾನಕ್ಕೆ ಚುನಾವಣೆ ಘೋಷಣೆ : vishwanews24
