ಅತ್ಯಾಚಾರ ಪ್ರಕರಣ : ಮಲಯಾಳಂ ನಟ ಸಿದ್ದಿಖಿ ವಿರುದ್ಧ ಎಫ್‌ ಐಆರ್‌ ದಾಖಲು !- vishwanews24

Featured, ರಾಷ್ಟ್ರ ನ್ಯೂಸ್

ಅತ್ಯಾಚಾರ ಪ್ರಕರಣ : ಮಲಯಾಳಂ ನಟ ಸಿದ್ದಿಖಿ ವಿರುದ್ಧ ಎಫ್‌ ಐಆರ್‌ ದಾಖಲು

ತಿರುವನಂತಪುರಂ:ಮಲಯಾಳಂ ಚಿತ್ರೋದ್ಯಮದಲ್ಲಿನ ಲೈಂಗಿಕ ಹಗರಣ ಭಾರೀ ಸಂಚಲನ ಮೂಡಿಸಿದ್ದು, ನಟಿಯರ ಆರೋಪದ ಹಿನ್ನೆಲೆಯಲ್ಲಿ ಮಲಯಾಳಂ ನಟ ಸಿದ್ದಿಖಿ ವಿರುದ್ಧ ಕೇರಳ ಪೊಲೀಸರು ಅತ್ಯಾಚಾರ ಆರೋಪದಡಿ ಎಫ್‌ ಐಆರ್‌ ದಾಖಲಿಸಿರುವುದಾಗಿ ವರದಿ ತಿಳಿಸಿದೆ.

ನಟಿಯರ ದೂರಿನ ಆಧಾರದ ಮೇಲೆ ತ್ರಿವೇಂಡ್ರಮ್‌ ಮ್ಯೂಸಿಯಂ ಪೊಲೀಸ್‌ ಜಾಮೀನು ರಹಿತ  ಆರೋಪದಲ್ಲಿ ರೇಪ್ ಕೇಸ್‌ ಅನ್ನು‌ ದಾಖಲಿಸಿರುವುದಾಗಿ ವರದಿ ವಿವರಿಸಿದೆ.

ಕಡಬ: ಶಾಲಾ ಕಟ್ಟಡ ಕುಸಿದು ನಾಲ್ವರು ವಿದ್ಯಾರ್ಥಿಗಳಿಗೆ ಗಾಯ – ಇಂಜಿನಿಯರ್ , ಮುಖ್ಯಶಿಕ್ಷಕ ಅಮಾನತು : ಜಿಲ್ಲಾಧಿಕಾರಿ ಆದೇಶ – vishwanews24

ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಆರೋಪದ ಕುರಿತು ತನಿಖೆ ನಡೆಸಲು ರಚಿಸಿದ್ದ ವಿಶೇಷ ತನಿಖಾ ತಂಡಕ್ಕೆ ಮಂಗಳವಾರ (ಆ.27) ಸಂಜೆ ನಟಿ ದೂರು ನೀಡಿರುವುದಾಗಿ ವರದಿ ತಿಳಿಸಿದೆ.

2016ರಲ್ಲಿ ನಡೆದಿದ್ದ ಈ ಘಟನೆ ಬಗ್ಗೆ ನಟ ಸಿದ್ದಿಖಿ ವಿರುದ್ಧ ದೂರು ನೀಡಲು ನಟಿ ತಯಾರಾಗಿರಲಿಲ್ಲವಾಗಿತ್ತು. ಆದರೆ ಹೇಮಾ ಸಮಿತಿ ವರದಿ ಬಗ್ಗೆ ಹಿರಿಯ ನಟಿಯರು ಮೌನ ಮುರಿದ ನಂತರ ನಟಿ ದೂರು ನೀಡಲು ನಿರ್ಧರಿಸಿರುವುದಾಗಿ ಮೂಲಗಳು ತಿಳಿಸಿವೆ.

ಮಣಿಪಾಲ: ನೀರಿನಲ್ಲಿ ಮುಳುಗಿದ್ದ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು – vishwanews24

Leave a Reply