ಅತ್ಯುತ್ತಮ ವಿದೇಶಿ ಭಾಷೆ ಚಿತ್ರ ಹಾಗೂ ಹಾಡು- ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ ಗಳಿಸಿದ RRR – Vishwanews24
ಅತ್ಯುತ್ತಮ ವಿದೇಶಿ ಭಾಷೆ ಚಿತ್ರ ಹಾಗೂ ಹಾಡು- ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ ಗಳಿಸಿದ RRR
ಹೊಸದಿಲ್ಲಿ: ದೇಶಕ್ಕೇ ಪ್ರಥಮ ಬಾರಿಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಇತ್ತೀಚೆಗೆ ಪಡೆದುಕೊಂಡ ರಾಜಮೌಳಿ ಅವರ ಆರ್ ಆರ್ಆರ್ (RRR) ಚಲನಚಿತ್ರ ಇದೀಗ ಲಾಸ್ ಏಂಜಲಿಸ್ನ ಫೇರ್ಮೊಂಟ್ ಸೆಂಚುರಿ ಪ್ಲಾಝಾದಲ್ಲಿ ನಡೆದ ಸಮಾರಂಭದಲ್ಲಿ ಅತ್ಯುತ್ತಮ ವಿದೇಶಿ ಭಾಷೆ ಚಲನಚಿತ್ರಕ್ಕಾಗಿ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ ಗಳಿಸಿದರೆ ಚಿತ್ರದಲ್ಲಿ ಜೂನಿಯರ್ ಎನ್ಟಿಆರ್ ಮತ್ತು ರಾಮ್ಚರಣ್ ಅಭಿನಯದಲ್ಲಿ ಮೂಡಿ ಬಂದ ʼನಾಟು ನಾಟುʼ ಹಾಡಿಗೆ ಅತ್ಯುತ್ತಮ ಹಾಡು ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ ದೊರಕಿದೆ.

ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಗೆ ಆರ್ಆರ್ಆರ್ ಇತರ ಚಿತ್ರಗಳಾದ ʻಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್,ʼ ʼಆರ್ಜೆಂಟಿನಾ 1985,ʼ ʼಬಾರ್ಡೊ,ʼ ʼಫಾಲ್ಸ್ ಕ್ರಾನಿಕಲ್ ಆಫ್ ಎ ಹ್ಯಾಂಡ್ಫುಲ್ ಟ್ರುತ್ʼ ಇವುಗಳೆದುರು ಸ್ಪರ್ಧಿಸಿತ್ತು.
ಸ್ಯಾಂಟ್ರೋ ರವಿ ಕೇಸ್ ಸಿಐಡಿಗೆ ವರ್ಗಾವಣೆಗೆ : ಗೃಹ ಸಚಿವ ಆರಗ ಜ್ಞಾನೇಂದ್ರ – Vishwanews24
ಎಸ್ಎಸ್ ರಾಜಮೌಳಿ ಮತ್ತವರ ಪುತ್ರ ಎಸ್ ಎಸ್ ಕಾರ್ತಿಕೇಯ ಅವರು ವೇದಿಕೆಗೆ ತೆರಳಿ ಈ ಪ್ರಶಸ್ತಿ ಸ್ವೀಕರಿಸಿದರು. ಈ ಕುರಿತು 28ನೇ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್ ಇದರ ಅಧಿಕೃತ ಟ್ವಿಟರ್ ಹ್ಯಾಂಡಲ್ ಕೂಡ ಟ್ವೀಟ್ ಮಾಡಿ RRR ತಂಡಕ್ಕೆ ಅಭಿನಂದನೆ ಸಲ್ಲಿಸಿದೆ.
Join our Whatsapp group by clicking the below link 👇👇
