ಅನಾರೋಗ್ಯ – ಕಾಪು ಕಾಲೇಜು ಉಪನ್ಯಾಸಕಿ ಮೃತ್ಯು – Vishwanews24
ಅನಾರೋಗ್ಯ – ಕಾಪು ಕಾಲೇಜು ಉಪನ್ಯಾಸಕಿ ಮೃತ್ಯು
ಉಡುಪಿ: ಅನಾರೋಗ್ಯದಿಂದ ಅಸ್ವಸ್ಥಗೊಂಡು ಕಾಪು ಕಾಲೇಜಿನ ಉಪನ್ಯಾಸಕಿಯೊಬ್ಬರು ಮೃತಪಟ್ಟ ಘಟನೆ ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಾಪು ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿಕೊಂಡಿದ್ದ ಸುಶೀಲ (39) ಮೃತಪಟ್ಟವರು. ಇವರು ಫೆ.3 ರಂದು ತಮ್ಮ ಗಂಡನ ಬೈಕಿನಲ್ಲಿ ಹೋಗುತ್ತಿರುವಾಗ ಪುತ್ತೂರು ಗ್ರಾಮದ ಸಂತೆಕಟ್ಟೆ ಮಾಸ್ತಿಯಮ್ಮ ದೇವಸ್ಥಾನದ ಬಳಿ ತಲೆ ಸುತ್ತು ಬರುತ್ತಿರುವಾಗಿ ತಿಳಿಸಿದ ಮೇರೆಗೆ ಬೈಕ್ ನಿಲ್ಲಿಸಿದಾಗ, ಬೈಕ್ನಿಂದ ಇಳಿದು ಕೆಳಗೆ ಬಿದ್ದಿದ್ದರು. ತಕ್ಷಣ ಅವರನ್ನು ಉಡುಪಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅಲ್ಲಿನ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ನಿನ್ನೆ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂಬುದಾಗಿ ಮೃತರ ಅಣ್ಣ ಗಣೇಶ್ ಎಂಬವರು ನೀಡಿದ ಮಾಹಿತಿಯಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ : ನಾಳೆ ( ಫೆ.9 ) ರಂದು ಪ್ರಮೋದ್ ಮುತಾಲಿಕ್ ಪಾಂಚಜನ್ಯ ಸಂಘಟನಾ ಕಾರ್ಯಾಲಯ ಉದ್ಘಾಟನೆ – Vishwanews24
