ಅನ್ನಭಾಗ್ಯ ಪಡಿತರ ಅಕ್ಕಿ ಮಾರಾಟ : ದಂಡದ ಜೊತೆ 6 ತಿಂಗಳು ಕಾರ್ಡು ಅಮಾನತು: ಡಿಸಿ ಜಿ. ಜಗದೀಶ್ ಎಚ್ಚರಿಕೆ -Vishwanews24
ಅನ್ನಭಾಗ್ಯ ಪಡಿತರ ಅಕ್ಕಿ ಮಾರಾಟ : ದಂಡದ ಜೊತೆ 6 ತಿಂಗಳು ಕಾರ್ಡು ಅಮಾನತು: ಡಿಸಿ ಜಿ. ಜಗದೀಶ್ -Vishwanews24
ಉಡುಪಿ: ಅನ್ನಭಾಗ್ಯ ಪಡಿತರ ಅಕ್ಕಿಯನ್ನು ಮಾರಾಟ ಮಾಡಿದರೆ ದಂಡದ ಜೊತೆಗೆ ಆರು ತಿಂಗಳು ಕಾರ್ಡು ಅಮಾನತು ಮಾಡುವುದಾಗಿ ಡಿಸಿ ಜಿ. ಜಗದೀಶ್ ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕ ವಿತರಣಾ ಪದ್ದತಿ 2016ರ ನಿಯಮ 18ಎ ರ ತಿದ್ದುಪಡಿ ಆದೇಶ-2020ರ ಪ್ರಕಾರ ಪಡಿತರ ಚೀಟಿದಾರರು ನೀಡುವ ಆಹಾರಧಾನ್ಯವನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಅಥವಾ ಮಾರಾಟ ಮಾಡಲು ದಾಸ್ತಾನು ಮಾಡಿದವರ ವಿರುದ್ಧ ಮುಕ್ತ ಮಾರುಕಟ್ಟೆ ದರದಲ್ಲಿ ದಂಡ ವಿಧಿಸಲಾಗುವುದು ಮತ್ತು ಆರು ತಿಂಗಳವರೆಗೆ ಅವರ ಕಾರ್ಡನ್ನು ಅಮಾನತು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
