ಅಪಘಾತಕ್ಕೆ ನಾಂದಿ ಹಾಡುತ್ತಿದೆ ಕಟಪಾಡಿ ಹೆದ್ದಾರಿಯಲ್ಲಿ ಕೆಟ್ಟು ನಿಂತ ಟ್ಯಾಂಕರ್- ವಾರ ಕಳೆದರೂ ತೆರವಾಗದ ಟ್ಯಾಂಕರ್ ಸದ್ಯ ಡೇಂಜರ್ ಸ್ಪಾಟ್: Vishwanews24

Featured, ಉಡುಪಿ

ಅಪಘಾತಕ್ಕೆ ನಾಂದಿ ಹಾಡುತ್ತಿದೆ ಕಟಪಾಡಿ ಹೆದ್ದಾರಿಯಲ್ಲಿ ಕೆಟ್ಟು ನಿಂತ ಟ್ಯಾಂಕರ್- ವಾರ ಕಳೆದರೂ ತೆರವಾಗದ ಟ್ಯಾಂಕರ್ ಸದ್ಯ ಡೇಂಜರ್ ಸ್ಪಾಟ್: Vishwanews24

ಕಾಪು: ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಜಂಕ್ಷನ್ನಲ್ಲಿ ಕಳೆದ ಒಂದು ವಾರದಿಂದ ಟ್ಯಾಂಕರೊಂದು ತಾಂತ್ರಿಕ ಕಾರಣದಿಂದ ಕೆಟ್ಟು ಹೋದ ಪರಿಣಾಮವಾಗಿ ಹೆದ್ದಾರಿಯ ಒಂದು ಬದಿಯಲ್ಲಿ ಅಡ್ಡಲಾಗಿ ನಿಂತಿದೆ.
ಕೆಟ್ಟು ನಿಂತ ಲಾರಿಯ ಅನತಿ ದೂರದಲ್ಲಿ ಬ್ಯಾರಿಗೇಟ್ ಅಳವಡಿಸಿದ್ದರೂ ಕೂಡ ಮಳೆಗಾಲದಲ್ಲಿ ಮತ್ತು ಒವರ್ ಟೇಕ್ ಮಾಡಿಕೊಂಡು ಬರುವ ವಾಹನ ಸವಾರರಿಗೆ ಇದೊಂದು ಪ್ರಾಣಕಂಕಟವಾಗಿ ಪರಿಣಮಿಸಿದೆ.
ರಾತ್ರಿಯ ಸಮಯದಲ್ಲಿ ವಾಹನ ಚಾಲನೆ ಮಾಡುವವರಿಗಂತೂ ಇದನ್ನು ದಾಟಿಕೊಂಡು ಹೋಗುವುದೆ ಒಂದು ಸಾಹಸವಾಗಿಬಿಟ್ಟಿದೆ.
ಸದ್ಯ 20 ಮೀಟರ್ ದೂರದಲ್ಲಿಯೇ ಕಟಪಾಡಿ ಹೊರಪೊಲೀಸ್ ಠಾಣೆಯಿದ್ದರು ಇದುವರೆಗೆ ಈ ಟ್ಯಾಂಕರ್ ತೆರವು ಕಾರ್ಯ ಯಾಕಗಿಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಮುಂದೆ ನಡೆಯುವ ಯಾವುದಾದರೂ ಅನಾಹುತ ನಡೆಯುವ ಮುನ್ನಾ ಸಂಬಂಧಪಟ್ಟ ಇಲಾಖೆ ಹೆದ್ದಾರಿಯಲ್ಲಿ ಕೆಟ್ಟು ನಿಂತ ಟ್ಯಾಂಕರ್ ತೆರವು ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

 

Watch video:- https://fb.watch/dOnIW5IeKX/https://fb.watch/dOnIW5IeKX/

Leave a Reply