ಅಪ್ರಾಪ್ತ ಬಾಲಕಿಯ ಜತೆ ಸುತ್ತಾಟ – ಯುವಕನ ಮೇಲೆ‌ ಬಜರಂಗದಳ ಕಾರ್ಯಕರ್ತರಿಂದ ಹಲ್ಲೆ ;  7 ಜನ ಕಾರ್ಯಕರ್ತರ  ಬಂಧನ – Vishwanews24

Featured, ರಾಜ್ಯ ನ್ಯೂಸ್

ಡ್ಯಾನ್ಸ್ ಮಾಸ್ಟರ್ ವಿರುದ್ದ ಲವ್ ಜಿಹಾದ್ ಆರೋಪ..

ಅಪ್ರಾಪ್ತ ಬಾಲಕಿಯ ಜತೆ ಸುತ್ತಾಡುತ್ತಿದ್ದ ಡ್ಯಾನ್ಸ್ ಮಾಸ್ಟರ್ ರೂಮನ್ ..

ಬಾಲಕಿಯ ಜತೆ ರೂಮನ್ ಓಡಾಡಿದ ವಿಡಿಯೋ ಮತ್ತು ಪೋಟೋಗಳು ವೈರಲ್..

ಅನ್ಯಕೋಮಿನ ಯುವಕನ ಮೇಲೆ‌ ಬಜರಂಗದಳ ಕಾರ್ಯಕರ್ತರಿಂದ ಹಲ್ಲೆ..

 7 ಜನ ಭಜರಂಗದಳ ಕಾರ್ಯಕರ್ತರ  ಬಂಧನ..

ಡ್ಯಾನ್ಸ್ ಮಾಸ್ಟರ್ ರೂಮನ್ ವಿರುದ್ಧ ಬಾಲಕಿಯ ಪೋಷಕರಿಂದ ದೂರು – ಪೋಕ್ಸೋ ಪ್ರಕರಣ ದಾಖಲು

ಭಜರಂಗ ದಳದ ಕಾರ್ಯಕರ್ತರು ತನ್ನನ್ನು ಅಪಹರಿಸಿ ಹಲ್ಲೆ ನಡೆಸಿದ್ದಾರೆ : ರೂಮನ್

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮತ್ತೆ ಲವ್ ಜಿಹಾದ್ ಪ್ರಕರಣ ನಡೆದಿದ್ದು ಅನ್ಯಕೋಮಿನ ಯುವಕನ ಮೇಲೆ‌ ಬಜರಂಗದಳ ಕಾರ್ಯಕರ್ತರು ನೈತಿಕ ಪೊಲೀಸ್ ಗಿರಿ ನಡೆಸಿದ ಘಟನೆ ನಡೆದಿದೆ.

ಡ್ಯಾನ್ಸ್ ಮಾಸ್ಟರ್ ವಿರುದ್ದ ಲವ್ ಜಿಹಾದ್ ಆರೋಪವಿದ್ದು, ಅಪ್ರಾಪ್ತ ಬಾಲಕಿ ಜೊತೆ ಯುವಕ ಸುತ್ತಾಡುತ್ತಿದ್ದ ಎಂಬ ಹಿನ್ನೆಲೆಯಲ್ಲಿ ಹಲ್ಲೆ ನಡೆಸಲಾಗಿದೆ.
ಡ್ಯಾನ್ಸ್ ಮಾಸ್ಟರ್ ಮೇಲೆ ಬಜರಂಗದಳ ಕಾರ್ಯಕರ್ತರು ಹಲ್ಲೆ ನಡೆಸಿದ್ದು ಭಜರಂಗದಳ ಜಿಲ್ಲಾ ಸಂಚಾಲಕ ಸಿ.ಡಿ.ಶಿವಕುಮಾರ್, ಸ್ವರೂಪ್, ಕಾರ್ತಿಕ್, ಮಧು, ರಂಜಿತ್, ಪರೀಕ್ಷಿತ್, ಪ್ರಜ್ವಲ್ ಅವರನ್ನು ಬಂಧಿಸಲಾಗಿದೆ.

ಉಡುಪಿ: ಅಯೋಧ್ಯೆ ಬಾಲರಾಮನಿಗೆ ಶ್ರೀ ಕಾಶಿಮಠ ಸುವರ್ಣ ಪೀಠ ಪ್ರಭಾವಳಿ ಸಮರ್ಪಣೆ – Vishwanews24

ಅಪ್ರಾಪ್ತ ಬಾಲಕಿಯ ಜತೆ ಸುತ್ತಾಡುತ್ತಿದ್ದ ಡ್ಯಾನ್ಸ್ ಮಾಸ್ಟರ್ ರೂಮನ್ ವಿರುದ್ದ ಬಾಲಕಿಯ ಪೋಷಕರು ನೀಡಿದ ದೂರಿನ ಅನ್ವಯ ಪೋಕ್ಸೋ ಪ್ರಕರಣ ದಾಖಲಾಗಿದೆ. ಬಾಲಕಿಯ ಜತೆ ರೂಮನ್ ಓಡಾಡಿದ ವಿಡಿಯೋ ಮತ್ತು ಪೋಟೋಗಳು ವೈರಲ್ ಆಗಿದೆ.

ಆಲ್ದೂರು ಸಮೀಪದ ಗಾಳಿಗಂಡಿಯ ಯುವಕ ರೂಮನ್, ತನ್ನನ್ನು ಭಜರಂಗ ದಳದ ಕಾರ್ಯಕರ್ತರು ಆಲ್ದೂರಿಗೆ ಕರೆಸಿ ಬಳಿಕ ಅಪಹರಿಸಿ ಹಲ್ಲೆ ನಡೆಸಿದ್ದಾರೆ ಎಂದು ದೂರು ದಾಖಲಿಸಿದ್ದ. ಅಲ್ಲದೇ ಇದೀಗ ಡ್ಯಾನ್ಸ್ ಮಾಸ್ಟರ್ ರೂಮನ್ ವಿರುದ್ಧ ಸಹ ಬಾಲಕಿಯ ಪೋಷಕರು ಆಲ್ದೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೋ (POCSO) ಪ್ರಕರಣ ದಾಖಲಿಸಿದ್ದಾರೆ.

ಘಟನೆ ಹಿನ್ನಲೆ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

ದಕ್ಷಿಣ ಕನ್ನಡ ಕಾಂಗ್ರೆಸ್​​ನಲ್ಲಿ ಟಿಕೆಟ್​ಗೆ ಭಾರೀ ಪೈಪೋಟಿ ; ಅಚ್ಚರಿಯ ರೀತಿಯಲ್ಲಿ ಯುಟಿ ಖಾದರ್ ಹೆಸರು ಪ್ರಸ್ತಾಪ – Vishwanews24

Leave a Reply