ಅಭಿಮಾನಿಗಳಿಂದ ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪು ಅವರ ಐವತ್ತನೆ ಹುಟ್ಟು ಹಬ್ಬ ಆಚರಣೆ.
ಅಭಿಮಾನಿಗಳಿಂದ ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪು ಅವರ ಐವತ್ತನೆ ಹುಟ್ಟು ಹಬ್ಬ ಆಚರಣೆ.
ಕಾಪು: ಸಹಕಾರಿ, ಸಾಮಾಜಿಕ, ಧಾರ್ಮಿಕ ಮುಂದಾಳು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಐಕಳ ಬಾವ ಡಾ.ದೇವಿ ಪ್ರಸಾದ್ ಬೆಳಪು ಅವರ 50 ನೇ ವರ್ಷದ ಹುಟ್ಟು ಹಬ್ಬದ ಸುವರ್ಣ ಸಂಭ್ರಮವನ್ನು ಅಭಿಮಾನಿಗಳು ಬೆಳಪು ಗ್ರಾಮ ಪಂಚಾಯತ್ ನ ನಜೀರ್ ಸಾಹೇಬ್ ಸಭಾಂಗಣದಲ್ಲಿ ಆಚರಿಸಿದರು.
ನೂರಾರು ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ದೇವಿಪ್ರಸಾದ್ ಶೆಟ್ಟಿಯವರಿಗೆ ಸನ್ಮಾನಿಸಿ,ಕೇಕ್ ಕತ್ತರಿಸಿ ಆಚರಣೆ ನಡೆಸಿ ಶುಭ ಹಾರೈಸಿದರು.

