“ಅಮೃತಸಂಜೀವಿನಿ ಮಂಗಳೂರು” : ಬನ್ನಿ ಈ ಪುಟ್ಟಸಮಾಜ ಕಾರ್ಯದಲ್ಲಿ ಜೊತೆಯಾಗೋಣ…-Vishwanews24

Featured, ದಕ್ಷಿಣ ಕನ್ನಡ, ವಿಶೇಷ ಲೇಖನಗಳು

ಈ ಜಗತ್ತಿನಲ್ಲಿ ಪ್ರತಿಯೊಂದಕ್ಕೂ ಒಂದು ಆರಂಭ ಎಂಬುದಿದೆ. ಈ ಆರಂಭ ಎಂಬುದರಲ್ಲಿಯೂ ಪ್ರಯತ್ನ ಇದ್ದೆ ಇರುತ್ತದೆ ಎಂಬುದರಲ್ಲಿ ಎರಡುಮಾತಿಲ್ಲ.
ಪ್ರತಿಯೊಂದು ಘಟನೆಗೂ, ಸಂಘಟನ ಕ್ರಾಂತಿಗೂ, ಸಮಾಜ ಬದಲಾವಣೆಯ ಧ್ಯೇಯಕ್ಕೂ ಒಟ್ಟಾರೆ ಎಲ್ಲದಕ್ಕೂ ಪ್ರಯತ್ನ ಎಂಬುದಿದೆ..
ಆರಂಭದಲ್ಲಿ ಪ್ರಯತ್ನವೆಂಬುದು ಸಣ್ಣದಾಗಿ ಕಂಡರೂ, ಸಾದಿಸಿದ ನಂತರ ನಿರಂತರ ಪ್ರಯತ್ನ ಮುಂದುವರಿದಂತೆ ಅದರ ಸ್ವರೂಪವು ದೊಡ್ಡದಾಗುತ್ತಾ ಸಾಗುತ್ತದೆ..

ಹೀಗೆಯೇ ಕೆಲವೇ ಕೆಲವು ಯುವಮನಸ್ಸುಗಳಲ್ಲಿ ಮೂಡಿದ ಸೇವೆಯ ಕಲ್ಪನೆಯಿಂದ ಆರಂಭಗೊಂಡ ಅಮೃತಸಂಜೀವಿನಿ® ಇಂದು ಸಮಾಜವೇ ಎದ್ದು ನಿಂತು ಚಪ್ಪಾಳೆ ತಟ್ಟಿ ಪ್ರೊತ್ಸಾಹ ನೀಡುವ ಮಟ್ಟಕ್ಕೆ ಬಂದು ತಲುಪಿದೆ ಎಂದರೆ ಅತಿಶಯೋಕ್ತಿಯಲ್ಲ..

ಶ್ರೀ ಗುರು ದತ್ತಾತ್ರೇಯ ರ ಆಶೀರ್ವಾದ ದಿಂದ ಮುಂದುವರಿಯುತ್ತಿರವ ಈ ಸಂಸ್ಥೆ ತನ್ನ ಸೇವಾಪಯಣದಲ್ಲಿ 50 ಮಾಸಿಕ ಯೋಜನೆ,138 ತುರ್ತುಸೇವಾಯೋಜನೆಯಿಂದ 277 ಆಶಕ್ತ ಕುಟುಂಬಗಳಿಗೆ 50 ಲಕ್ಷದಷ್ಟು ಧನಸಹಾಯ ಮಾಡಿದ್ದು, ಇವೆಲ್ಲದರ ಹಿಂದೆ ಸೇವೆಯನ್ನೆ ಉಸಿರಾಗಿಸಿಕೊಂಡ ನಿಸ್ವಾರ್ಥ ಹೃದಯದ ಸಂಜೀವಿನಿಗಳ ಸತಪ್ರಯತ್ನವಿದೆ..

ಸಮುದ್ರದಲ್ಲಿ ನದಿಗಳ ಜೋಡಣೆಯ ರೀತಿಯಲ್ಲಿ ಅಮೃತಸಂಜೀವಿನಿ ಸಂಸ್ಥೆ ತನ್ನ ಸೇವಾಪಯಣದಲ್ಲಿ ಮುಂದೆ ಸಾಗುತ್ತಾ ಸಮಾಜದ ಇತರ ಸೇವಾಸಂಸ್ಥೆಗಳನ್ನು ತನ್ನೊಂದಿಗೆ ಸೇರಿಸುವ ಪ್ರಯತ್ನ ಮಾಡುತ್ತಾ ಬಂದಿದೆ.. ಈ ಪರಿವಾರ ಸಂಸ್ಥೆಗಳ ಜೋಡಣೆಯ ಕಲ್ಪನೆಯನ್ನು ನೀಡಿದ ಹಾಗೂ ಪ್ರಥಮ ಪರಿವಾರ ಸಂಸ್ಥೆಯಾಗಿ ಕಾಣಿಸಿಕೊಂಡಿದ್ದು *ರಾಜಕೇಸರಿ ಯೂತ್‌ ಕ್ಲಬ್ ಗಂಜಿಮಠ*.

ಸಂಜೀವಿನಿ ಸುವರ್ಣ ಸಂಗಮದಲ್ಲಿ ಯಾರನ್ನೂ ಕೈ ಬಿಡದೆ ಪ್ರತಿಯೊಂದು ಸೇವಾ ಸಂಸ್ಥೆಯನ್ನು ಗುರುತಿಸಿ ಸ್ಥಳೀಯ 32 ಸಂಸ್ಥೆಗಳಿಗೆ ಗೌರವಾರ್ಪನೆಯನ್ನು ನೀಡಿದ್ದು ಅಲ್ಲದೆ ಸಂಜೀವಿನಿ 25 ಪರಿವಾರ ಸಂಸ್ಥೆಗಳಿಗೆ ಗೌರವಾರ್ಪಣೆ ಮಾಡಲಾಯಿತು.

ಸೇವಾ ಸಂಗಮದ ಮಾನವೀಯ ಸಂಗಮಕ್ಕೆ ಜನಸಾಗರವೇ ಸಾಕ್ಷಿಯಾಗಿದ್ದು, ಪ್ರಯತ್ನಕ್ಕೆ ತಕ್ಕ ಫಲವೆಂಬಂತೆ ಅಮೃತಸಂಜೀವಿನಿಯು ರಾಜಕೇಸರಿ ಯೂತ್‌ ಕ್ಲಬ್ ಸಹಯೋಗದಿಂದ ತನ್ನ 50 ಮಾಸಿಕ ಯೋಜನೆಯನ್ನು *ಸುವರ್ಣ ಸಂಗಮ* ಕಾರ್ಯಕ್ರಮದ ಮೂಲಕ 50 ಬಡಕುಟುಂಬಗಳಿಗೆ ಸಹಾಯ ನೀಡಿ ಸಮಾಜದ ಋಣ ತೀರಿಸುವ ಕಾರ್ಯವನ್ನು ಯಾವುದೇ ವಿಘ್ನವಿಲ್ಲದೆ ಯಶಸ್ವಿಯಾಗಿ ಮುಗಿಸಿದೆ. ಸಹೃದಯಿ ಸಂಜೀವಿನಿಗಳ ಸಹಕಾರಕ್ಕೆ ಕೃತಜ್ಞರಾಗಿ,

51ನೇ ಮಾಸಿಕ ಯೋಜನೆಗೆ ಮುಂದಡಿ ಇಡುತ್ತಾ ಸಮಾಜದ ಮುಂದೆ ಕೈ ಜೋಡಿಸುತ್ತೆವೆ..
ಅಮೃತಸಂಜೀವಿನಿಯ ಈ ಬೃಹತ್ ಕಾರ್ಯಕ್ರಮಕ್ಕೆ ಪ್ರತ್ಯಕ್ಷ, ಪರೋಕ್ಷವಾಗಿ ದುಡಿದ ಪ್ರತಿಯೊಬ್ಬ ಸಹೃದಯಿ ಸಂಜೀವಿನಿಗಳಿಗೂ ಧನ್ಯವಾದ ಸಲ್ಲಿಸುತ್ತಾ, ನಿಮ್ಮ ಸಹಕಾರಕ್ಕೆ ಕೃತಜ್ಞರಾಗಿ.

ಬನ್ನಿ ಈ ಪುಟ್ಟಸಮಾಜ ಕಾರ್ಯದಲ್ಲಿ ಜೊತೆಯಾಗೋಣ…
ಹಸ್ತ ಹಸ್ತಗಳ ಬೆಸೆದು ಸಮಾಜವ ಬಲಗೊಳಿಸಲೊಂದು ಹೆಜ್ಜೆಯನಿಡೋಣ…
ಮಿಡಿಯಲಿ ನಮ್ಮೀ ಮನವು ಧರ್ಮಕಾರ್ಯದ ಚಿತ್ತದಿ ಪೂರ್ಣಶಕ್ತರೂ ನಾವಲ್ಲ, ಮಿಡಿವ ಮಹಾಮನವು ನಮ್ಮದಷ್ಟೇ.

ನಿಮ್ಮ ಪ್ರೀತಿಯ ಸಹಕಾರದ ನಿರೀಕ್ಷೆಯಲ್ಲಿ *”ಅಮೃತಸಂಜೀವಿನಿ® ಮಂಗಳೂರು”

Name: #Amruthasanjeevini
#Bank : H.D.F.C
Branch: #M_G_Road_Mangalore / Ballalbagh_Mangalore
A/c no: 50200021761881
Ifsc code: HDFC0001269

*ಇ-ಮೇಲ್ ಸಂಪರ್ಕ…*
amruthasanjeevini@gmail.com

*ದೂರವಾಣಿ ಸಂಪರ್ಕ….*
+919743514603
+918904177609
+918147697946
ಜೈ ಅಮೃತಸಂಜೀವಿನಿ
ಜಯತು ನವಸಮಾಜ ಕಾರ್ಯಂ
🚩ಜೈ ಶ್ರೀ ಗುರು ದೇವ ದತ್ತ🚩

No photo description available.