ಅಯ್ಯಪ್ಪ ಭಕ್ತರ ಬಂಧನವಾದರೆ ಪರಿಣಾಮ ಭಾರೀ ಕೆಟ್ಟದಾಗಿರುತ್ತದೆ.! ಕಮ್ಯುನಿಸ್ಟ್ ಸರ್ಕಾರಕ್ಕೆ ವಾರ್ನಿಂಗ್ ನೀಡಿದ ಕೇರಳ ಹೈಕೋರ್ಟ್.!

Featured, ರಾಷ್ಟ್ರ ನ್ಯೂಸ್

೮೦೦ ವರ್ಷಗಳ ಇತಿಹಾಸವಿರುವ ಶಬರಿಮಲೆ ದೇವಾಲಯದ ವಿಚಾರವಾಗಿ ಕೇರಳದಲ್ಲಿ ದಿನೇ ದಿನೇ ಪ್ರತಿಭಟನೆಯ ಕಿಚ್ಚು ಹೆಚ್ಚುತ್ತಿದ್ದರೆ ದೇಶ ವಿದೇಶಗಳಲ್ಲಿ ಅಯ್ಯಪ್ಪ ಭಕ್ತರು ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಧ್ವನಿ ಎತ್ತಿದ್ದಾರೆ. ಶಬರಿಮಲೆ ಸನ್ನಿಧಾನಕ್ಕೆ ಯಾವುದೇ ಕಾರಣಕ್ಕೂ ಮಹಿಳೆಯರು ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಹಿಂದೂಪರ ಸಂಘಟನೆಗಳು ಮತ್ತು ಅಯ್ಯಪ್ಪ ಭಕ್ತರು ಪಟ್ಟುಹಿಡಿದಿದ್ದಾರೆ. ಈಗಾಗಲೇ ಋತುಮಾನದ ಪೂಜೆ ನಡೆದಿದ್ದು ಸುಪ್ರೀಂ ಕೋರ್ಟ್ ಆದೇಶವಿದ್ದರೂ ಒಂದೇ ಒಂದು ಮಹಿಳೆ ಕೂಡ ಸನ್ನಿಧಾನ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಹಿಂದೂ ಸಂಸ್ಕೃತಿಯನ್ನು ನಾಶ ಮಾಡಲೇಬೇಕು ಎಂದು ಪಣತೊಟ್ಟಿರುವ ಕಮ್ಯುನಿಸ್ಟ್ ಸರ್ಕಾರ ಶಬರಿಮಲೆ ವಿಚಾರವನ್ನೇ ಎತ್ತಿ ಹಿಡಿಯುವ ಪ್ರಯತ್ನ ಮಾಡಿತು, ಶಬರಿಮಲೆಗೆ ಹೋಗುವ ಮಹಿಳೆಯರಿಗೆ ಕೇರಳ ಸರಕಾರ ಪೊಲೀಸ್ ಭದ್ರತೆ ನೀಡುತ್ತದೆ ಎಂದು ಸ್ವತಃ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿಕೊಂಡಿದ್ದಾರೆ. ಅದೇ ರೀತಿ ಪ್ರವೇಶಿಸಲು ಯತ್ನಿಸಿದ ಮಹಿಳೆಯರಿಗೆ ಅಯ್ಯಪ್ಪ ಭಕ್ತರ ತಾಕತ್ತು ಏನೆಂಬುದು ಕೂಡ ಅರಿವಾಗಿದೆ, ಯಾಕೆಂದರೆ ಅಯ್ಯಪ್ಪ ಭಕ್ತರನ್ನು ದಾಟಿ ಯಾವೊಬ್ಬ ಮಹಿಳೆಯೂ ಸನ್ನಿಧಾನ ಪ್ರವೇಶಿಸಲು ಆಗಲಿಲ್ಲ. ಅದನ್ನೇ ಸವಾಲಾಗಿ ಸ್ವೀಕರಿಸಿದ ಕೇರಳ ಸರಕಾರ ಇದೀಗ ಮುಂದಿನ ದಿನಗಳಲ್ಲಿ ಆರಂಭವಾಗುವ ಮಂಡಲಪೂಜೆಗೆ ಆಗಮಿಸುವ ಭಕ್ತರನ್ನು ಬಂಧಿಸಿ ಮಹಿಳೆಯರಿಗೆ ಪ್ರವೇಶಿಸಲು ಅನುವು ಮಾಡಿಕೊಡಬೇಕೆಂಬ ತಂತ್ರ ರೂಪಿಸಿದೆ. ಈಗಾಗಲೇ ಹೋರಾಟದಲ್ಲಿ ಭಾಗಿಯಾದ ಸಾವಿರಕ್ಕೂ ಹೆಚ್ಚಿನ ಅಯ್ಯಪ್ಪ ಭಕ್ತರ ಮೇಲೆ ದೂರು ದಾಖಲಿಸಿ ಕೆಲವರನ್ನು ಬಂಧಿಸಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಭಕ್ತರನ್ನು ಇದೇ ರೀತಿ ಬಂಧಿಸಲಾಗುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ಕೇರಳ ಸರಕಾರ ರವಾನಿಸಿದೆ. ಆದರೆ ಇದೀಗ ಕೇರಳ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್, ಶಬರಿಮಲೆಗೆ ಆಗಮಿಸುವ ಭಕ್ತರ ವಿರುದ್ಧ ಯಾವುದೇ ಕ್ರಮ ಕೈಗೊಂಡರು ಅದರ ಪರಿಣಾಮ ನೆಟ್ಟಗಿರೋದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದೆ. ಆದ್ದರಿಂದ ಕಮ್ಯುನಿಸ್ಟ್ ಸರ್ಕಾರಕ್ಕೆ ಭಾರೀ ಮುಖಭಂಗವಾಗಿದ್ದು, ಶಬರಿಮಲೆಗೆ ಆಗಮಿಸುವ ಭಕ್ತರಿಗೆ ಸಂತಸ ತಂದಿದೆ.!

ಕೇರಳ ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ.!

ಹಿಂದೂಗಳ ಪವಿತ್ರ ಯಾತ್ರಾ ಸ್ಥಳವಾದ ಶಬರಿಮಲೆ ವಿಚಾರವಾಗಿ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಮಹಿಳೆಯರು ಸನ್ನಿಧಾನ ಪ್ರವೇಶಿಸಲು ಪ್ರಯತ್ನಿಸಿದ್ದರು. ಆದರೆ ಹಿಂದೂಯೇತರ ಮಹಿಳೆಯರು ಕೂಡ ಈ ಸಾಹಸಕ್ಕೆ ಕೈಹಾಕಿದ್ದು ಅಯ್ಯಪ್ಪ ಭಕ್ತರನ್ನು ಮತ್ತು ಹಿಂದೂಪರ ಸಂಘಟನೆಗಳನ್ನು ಕೆರಳಿಸುವಂತೆ ಮಾಡಿದೆ. ಆದ್ದರಿಂದಲೇ ಕೇರಳದಲ್ಲಿ ಹರಾತಾಳ, ಪ್ರತಿಭಟನೆ, ಹೋರಾಟ ನಡೆದಿತ್ತು. ಆದರೆ ಕೇರಳ ಸರಕಾರ ಪ್ರತಿಭಟನೆಯಲ್ಲಿ ಭಾಗಿಯಾದ ಸುಮಾರು ೨೦೦೦ಕ್ಕೂ ಹೆಚ್ಚು ಅಯ್ಯಪ್ಪ ಭಕ್ತರನ್ನು ಬಂಧಿಸಿತ್ತು. ಈ ಬಗ್ಗೆ ಈಗಾಗಲೇ ಹೈಕೋರ್ಟ್ ಸ್ಪಷ್ಟನೆ ಕೇಳಿದ್ದು, ಬಂಧಿಸುವ ನೆಪದಲ್ಲಿ ಅಮಾಯಕರನ್ನು ಜೈಲಿಗಟ್ಟಲಾಗಿದೆಯೇ ಎಂದು ಕೇರಳ ಸರಕಾರವನ್ನು ಪ್ರಶ್ನಿಸಿದೆ.

ಶಬರಿಮಲೆ ಪ್ರತಿಭಟನೆಗೆ ಸಂಬಂಧಿಸಿದಂತೆ ಕೇರಳ ಸರಕಾರ ಬಂಧಿಸಿರುವ ಅಯ್ಯಪ್ಪ ಭಕ್ತರ ಪೈಕಿ ಅನೇಕರು ಅಮಾಯಕರಾಗಿದ್ದಾರೆ , ಕೇರಳ ಸರಕಾರ ನಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದು ಅಯ್ಯಪ್ಪ ಭಕ್ತರು ಈಗಾಗಲೇ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಇದೇ ವಿಚಾರವಾಗಿ ಹೈಕೋರ್ಟ್ ಕೇರಳ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.‌ ಬಂಧನದಲ್ಲಿರುವವರ ಬಗ್ಗೆ ಸರಿಯಾದ ಮಾಹಿತಿಯನ್ನು ಹೈಕೋರ್ಟ್‌ಗೆ ನೀಡಬೇಕು, ಅಂತೆಯೇ ಒಂದು ವೇಳೆ ಅಮಾಯಕರ ಬಂಧನವಾಗಿದ್ದೇ ಆದಲ್ಲಿ ಕೇರಳ ಸರಕಾರ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿರುವ ಕೇರಳ ಹೈಕೋರ್ಟ್, ಮುಂದಿನ ದಿನಗಳಲ್ಲಿ ಶಬರಿಮಲೆಗೆ ಆಗಮಿಸುವ ಭಕ್ತರ ವಿಚಾರವಾಗಿ ಕೇರಳ ಸರಕಾರ ಮೂಗುತೂರಿಸಬಾರದು ಎಂದು ಆದೇಶಿಸಿದೆ.!

ಆದ್ದರಿಂದ ಶಬರಿಮಲೆ ವಿಚಾರವನ್ನೇ ತಮ್ಮ ತೀಟೆ ತೀರಿಸಿಕೊಳ್ಳಲು ಅವಕಾಶಕ್ಕಾಗಿ ಕಾಯುತ್ತಿರುವ ಕೇರಳ ಕಮ್ಯುನಿಸ್ಟ್ ಸರಕಾರಕ್ಕೆ ಭಾರೀ ಹಿನ್ನಡೆಯಾಗಿದೆ. ಅಯ್ಯಪ್ಪ ಭಕ್ತರ ವಿಚಾರವಾಗಿ ಕೇರಳ ಸರಕಾರದ ನಡೆಯನ್ನು ಖಂಡಿಸಿರುವ ಹೈಕೋರ್ಟ್ ಸರಿಯಾದ ತನಿಖೆಗೆ ಆದೇಶಿಸಿದೆ.!