ಅಲ್ಲಾಹು ಕೃಪೆಯಿಂದ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ : ಮುಖ್ಯಮಂತ್ರಿ ಕುಮಾರಸ್ವಾಮಿ ಪರ ಓವೈಸಿ

Featured, ಜಿಲ್ಲೆ

ಬಾಗಲಕೋಟೆ : ನಾನು ಮತ್ತೆ ಸಿಎಂ ಆಗುತ್ತೇನೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪರ ವಿರೋಧ ವ್ಯಕ್ತಪಡಿಸುವವರ ಸಂಖ್ಯೆ ಏರುತ್ತಿದ್ದು ಈಗ ಎಂಐಎಂ ರಾಷ್ಟ್ರೀಯ ಅಧ್ಯಕ್ಷ ಅಸಾದುದ್ದೀನ್​ ಓವೈಸಿ ಈ ಹೇಳಿಕೆ ವಿರೋಧಿಸಿ, ಮುಖ್ಯಮಂತ್ರಿ ಕುಮಾರಸ್ವಾಮಿ ಪರ ನಿಂತಿದ್ದಾರೆ.
ಗೌರವ, ಅಧಿಕಾರ ಕೊಡುವುದು ಭಗವಂತ ಕೈಯಲ್ಲಿದೆ. ಈ ಹಿಂದೆ ಕುಮಾರಸ್ವಾಮಿ ಕಿಂಗ್​ ಆಗುತ್ತಾರೆ ಎಂದು ಹೇಳಿದ್ದೆ. ಆಗ ಅಧಿಕಾರದಲ್ಲಿದ್ದವರು ಬೀದಿಗೆ ಬಂದಿದ್ದಾರೆ ಎಂದು ಇಳಕಲ್​ ನಗರದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಕುಮಾರಸ್ವಾಮಿ ಅಲ್ಲಾನ ಕೃಪೆಯಿಂದ ಕಿಂಗ್​ ಆಗಿದ್ದಾರೆ. ಕುಮಾರಸ್ವಾಮಿಯವರ ಮೇಲೆ ನನಗೆ ಭರವಸೆ ಇದೆ. ನಾವು ಜೆಡಿಎಸ್​ ಜತೆ ಹೊಂದಾಣಿಕೆ ಮಾಡಿಕೊಂಡಿದ್ದೇ ತಪ್ಪು ಎಂದು ಕೆಲವರು ಹೇಳಿದರು. ತಪ್ಪೇನು? ಅದೇನು ಇವರಪ್ಪನ ಆಸ್ತಿನಾ? ನಮಗೆ ಬಿಜೆಪಿ ತಡೆಯುವುದೇ ಉದ್ದೇಶ ಎಂದು ಹೇಳಿದರು.

ನಾವೇನೂ ಗುಲಾಮರಲ್ಲ :

ಜಾತ್ಯತೀತ ಸರ್ಟಿಫಿಕೇಟ್​ ಬೇಕೆಂದರೆ ನಮ್ಮ ಕಡೆ ಬನ್ನಿ ಎಂದು ಕಾಂಗ್ರೆಸ್​ ಹೇಳುತ್ತದೆ. ರಾಷ್ಟ್ರೀಯತೆ ಸರ್ಟಿಫಿಕೇಟ್​ ಬೇಕು ಎಂದರೆ ನಮ್ಮೊಂದಿಗೆ ಬನ್ನಿ ಎಂದು ಬಿಜೆಪಿ ಕರೆಯುತ್ತದೆ. ನಾವೇನು ನಿಮ್ಮ ಗುಲಾಮರಲ್ಲ. ಇವೆರಡೂ ಪಕ್ಷಗಳು ಲಾಲಾಗಳು ಇದ್ದ ಹಾಗೆ. ಅವರ ಅಂಗಡಿ ಬಂದ್​ ಮಾಡುವ ಸಮಯ ಬಂದಿದೆ ಎಂದು ವ್ಯಂಗ್ಯವಾಡಿದರು.