ಆಜಾನ್ ವಿವಾದ : ಹೈಕೋರ್ಟ್ ಆದೇಶ ಏನಿದೆ ಅದನ್ನು ಪಾಲಿಸಬೇಕು : ಕಮಲ್ ಪಂತ್ – Vishwanews24
ಧ್ವನಿವರ್ಧಕ ಬಳಸುವ ಮಸೀದಿ, ಮಂದಿರ ಸೇರಿ ಎಲ್ಲರಿಗೂ ನೋಟಿಸ್ ..
ಕಾನೂನು ಉಲ್ಲಂಘನೆ ಮಾಡಿದವರಿಗೆ ಶಿಕ್ಷೆ..
ಎಲ್ಲರೂ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳಬೇಕು..
ಬೆಂಗಳೂರು : ರಾಜ್ಯದಲ್ಲಿ ಹಿಜಾಬ್, ಹಲಾಲ್ ಬಳಿಕ ಆಜಾನ್ ವಿವಾದ ಭುಗಿಲೆದ್ದಿದ್ದು, ಈ ಸಂಬಂಧ ಶಬ್ಧಮಾಲಿನ್ಯ ರೂಲ್ಸ್ ಪಾಲಿಸದ 301 ಧಾರ್ಮಿಕ ಸ್ಥಳಗಳಿಗೆ ನೋಟಿಸ್ ನೀಡಲಾಗಿದೆ.
ಮಂದಿರ, ಮಸೀದಿ, ಚರ್ಚ್ಗಳಿಗೆ ಈ ನೋಟಿಸ್ ನೀಡಲಾಗಿದ್ದು, ಶಬ್ಧಮಾಲಿನ್ಯ ರೂಲ್ಸ್ ಸರಿಯಾಗಿ ಪಾಲಿಸುವಂತೆ ತಾಕೀತು ಮಾಡಲಾಗಿದೆ.

ಇನ್ನು ಈ ಕುರಿತು ಪ್ರತಿಕ್ರಿಯಿಸಿದ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್, ‘ಹೈಕೋರ್ಟ್ ಆದೇಶ ಏನಿದೆ ಅದನ್ನು ಪಾಲಿಸಬೇಕು. ಕಾನೂನು ಉಲ್ಲಂಘನೆ ಮಾಡಿದವರಿಗೆ ಶಿಕ್ಷೆ ಆಗುತ್ತೆ. ಇನ್ನು ಬೆಂಗಳೂರು ನಗರದಲ್ಲಿ ಮಾತ್ರ ಈಗಾಗಲೇ 40ಕ್ಕೂ ಹೆಚ್ಚು ಕೇಸ್ ದಾಖಲು ಮಾಡಲಾಗಿದೆ. ಬೆಂಗಳೂರಿನ ಹಲವೆಡೆ ಮೈಕ್ಗಳನ್ನ ಜಪ್ತಿ ಮಾಡಲಾಗಿದೆ. ಬಾಲ ಬಿಚ್ಚಿದ್ರೆ ಕಾನೂನು ಕ್ರಮ ಖಂಡಿತ. ಹಾಗಾಗಿ ಎಲ್ಲರೂ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳಬೇಕು’ ಎಂದು ಎಚ್ಚರಿಸಿದ್ದಾರೆ.
