ಆಡಳಿತ ಬದಲಾವಣೆ ಉದ್ದೇಶದಿಂದ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಭಾಗಿಯಾಗುವವರಿಗೆ ಸರಕಾರಿ ಉದ್ಯೋಗ ನಿರಾಕರಣೆ: ಉತ್ತರ ಪ್ರದೇಶ ಸರಕಾರದಿಂದ ನಿರ್ಧಾರ – vishwanews24
ಆಡಳಿತ ಬದಲಾವಣೆ ಉದ್ದೇಶದಿಂದ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಭಾಗಿಯಾಗುವವರಿಗೆ ಸರಕಾರಿ ಉದ್ಯೋಗ ನಿರಾಕರಣೆ: ಉತ್ತರ ಪ್ರದೇಶ ಸರಕಾರದಿಂದ ನಿರ್ಧಾರ
ಲಖನೌ: ಆಡಳಿತ ಬದಲಾವಣೆಯ ಉದ್ದೇಶದಿಂದ ನಡೆಯುವ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಭಾಗಿಯಾದವರಿಗೆ ಸರಕಾರಿ ಉದ್ಯೋಗ ನಿರಾಕರಿಸುವ ಅವಕಾಶ ಕಲ್ಪಿಸುವ ಮೂಲಕ ಉತ್ತರ ಪ್ರದೇಶ ಸರಕಾರವು ನೇರ ನೇಮಕಾತಿಯ ಅಭ್ಯರ್ಥಿಗಳ ಹಿನ್ನೆಲೆ ಪರಿಶೀಲನೆ ನಿಯಮಗಳನ್ನು ಬಿಗಿಗೊಳಿಸಿದೆ.
ಇತ್ತೀಚೆಗೆ ನಡೆದ ಪ್ರತಿಭಟನೆಯೊಂದರಲ್ಲಿ ‘ಆಡಳಿತ ಬದಲಾವಣೆ’ಗೆ ಕರೆ ನೀಡಿದ ವಿಚಾರ ರಾಜಕೀಯ ವಿವಾದಕ್ಕೆ ಕಾರಣವಾಗಿರುವ ಬೆನ್ನಲ್ಲೇ ಸರಕಾರ ಈ ಕ್ರಮ ಕೈಗೊಂಡಿದೆ. ಆದರೆ, ಅಭ್ಯರ್ಥಿಯ ರಾಜಕೀಯ ಸಿದ್ಧಾಂತವನ್ನು ಮಾತ್ರ ಆಧರಿಸಿ ಸರಕಾರಿ ಉದ್ಯೋಗಕ್ಕೆ ಅನರ್ಹರೆಂದು ಘೋಷಿಸುವಂತಿಲ್ಲ ಎಂದು ಸರಕಾರ ಸ್ಪಷ್ಟಪಡಿಸಿದೆ.
ಇದನ್ನೂ ಓದಿ :
ಕಾಸರಗೋಡು : ಲಾಡ್ಜ್‌ನಲ್ಲಿ ಎಂಡಿಎಂಎ ಪತ್ತೆ: ಇಬ್ಬರ ಬಂಧನ – vishwanews24
ಅದೇ ರೀತಿ, ಅಭ್ಯರ್ಥಿಯ ವಿರುದ್ಧ ಎಫ್‌ಐಆರ್ ದಾಖಲಾಗಿದ್ದರೆ ಅಥವಾ ತನಿಖೆ ನಡೆಯುತ್ತಿದೆ ಎಂಬ ಕಾರಣಕ್ಕೆ ಉದ್ಯೋಗ ನಿರಾಕರಿಸುವಂತಿಲ್ಲ. ಪ್ರಕರಣದ ಹಿನ್ನೆಲೆ ಮತ್ತು ಸಂದರ್ಭಗಳನ್ನು ಪರಿಶೀಲಿಸಿದ ಬಳಿಕವೇ ಅಧಿಕಾರಿಗಳು ನಿರ್ಧಾರ ಕೈಗೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿಚಾರವಾಗಿ ಉತ್ತರ ಪ್ರದೇಶದ ಬಿಜೆಪಿ ಸರಕಾರ ಮತ್ತು ವಿರೋಧ ಪಕ್ಷಗಳ ನಡುವಿನ ಸಂಘರ್ಷ ತೀವ್ರಗೊಂಡಿರುವ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿದೆ.
ಇದನ್ನೂ ಓದಿ :
