ಆನ್‌ಲೈನ್‌ ಮೂಲಕ ಲಸಿಕೆಗೆ ನೋಂದಣಿ ಕಡ್ಡಾಯ ಎಂಬುದು ಸರಿಯಲ್ಲ : ರಾಹುಲ್‌ ಗಾಂಧಿ – Vishwanews24

Featured, ರಾಷ್ಟ್ರ ನ್ಯೂಸ್

ಆನ್‌ಲೈನ್‌ ಮೂಲಕ ಲಸಿಕೆಗೆ ನೋಂದಣಿ ಕಡ್ಡಾಯ ಎಂಬುದು ಸರಿಯಲ್ಲ : ರಾಹುಲ್‌ ಗಾಂಧಿ – Vishwanews24

ನವದೆಹಲಿ,: ‘ಕೋವಿನ್‌’ ಪೋರ್ಟಲ್‌ನಲ್ಲಿ ಲಸಿಕೆಗೆ ನೋಂದಣಿ ಮಾಡಿಸಿಕೊಳ್ಳುವುದು ಸರಿಯಲ್ಲ, ಇಂಟರ್‌ನೆಟ್‌ ಸೌಲಭ್ಯ ಇಲ್ಲದವರಿಗೂ ಲಸಿಕೆ ಪಡೆಯುವ ಹಕ್ಕಿದೆ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, “ಆನ್‌ಲೈನ್‌ ಮೂಲಕ ನೋಂದಣಿ ಕಡ್ಡಾಯ ಎಂಬುದು ಸರಿಯಲ್ಲ. ಲಸಿಕೆ ಕೇಂದ್ರಕ್ಕೆ ಬರುವ ಪ್ರತಿ ಅರ್ಹ ವ್ಯಕ್ತಿಗೂ ಲಸಿಕೆ ನೀಡಬೇಕು. ಇಂಟರ್‌ನೆಟ್‌ ಸೌಲಭ್ಯ ಹೊಂದಿರದವರೂ ಬದುಕುವ ಹಕ್ಕು ಹೊಂದಿದ್ದಾರೆ” ಎಂದಿದ್ದಾರೆ.

ಇನ್ನು ಕೊರೊನಾ ಲಸಿಕೆ ಪಡೆಯಲು ‘ಕೋವಿನ್‌’ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಸುವುದನ್ನು ಕಡ್ಡಾಯಗೊಳಿಸಬಾರದು ಎಂದು ಕಾಂಗ್ರೆಸ್‌ ಮೊದಲಿನಿಂದಲೂ ಆಗ್ರಹಿಸುತ್ತಲೇ ಇದೆ.

ನಗರ ಪ್ರದೇಶಗಳಿಂದ ದೂರ ವಾಸಿಸುತ್ತಿರುವವರು, ಗ್ರಾಮೀಣ ಪ್ರದೇಶದವರು ಹಾಗೂ ಬಡವರಲ್ಲಿ ಸ್ಮಾರ್ಟ್‌ಫೋನ್‌ ಇರುವುದಿಲ್ಲ. ಡಿಜಿಟಲ್‌ ಸಂಪರ್ಕದಿಂದ ವಂಚಿರಿರುವವರಿಗೆ ಕೂಡ ಲಸಿಕೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.