ಆರೋಗ್ಯದಲ್ಲಿ ಏರುಪೇರು : ನಟ ಕಮಲ್ ಹಾಸನ್ ಆಸ್ಪತ್ರೆಗೆ ದಾಖಲು – Vishwanews24
ಆರೋಗ್ಯದಲ್ಲಿ ಏರುಪೇರು : ನಟ ಕಮಲ್ ಹಾಸನ್ ಆಸ್ಪತ್ರೆಗೆ ದಾಖಲು
ಭಾರತೀಯ ಸಿನಿಮಾ ರಂಗದ ಹೆಸರಾಂತ ನಟ ಕಮಲ್ ಹಾಸನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಅವರನ್ನು ಚೆನ್ನೈನ ಶ್ರೀ ರಾಮಚಂದ್ರ ಮೆಡಿಕಲ್ ಸೆಂಟರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವು ದಿನಗಳಿಂದ ಅವರು ತೀರ್ವ ಜ್ವರದಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದ್ದು, ಜ್ವರ ಕಡಿಮೆ ಆಗದ ಕಾರಣಕ್ಕಾಗಿ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.

ಕಮಲ್ ಗೆ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದ್ದು, ಇನ್ನೆರಡು ದಿನಗಳಲ್ಲಿ ಡಿಸ್ಚಾರ್ಜ್ ಆಗಬಹುದು ಎನ್ನಲಾಗುತ್ತಿದೆ. ಇದೀಗ ಜ್ವರ ಕೂಡ ಕಡಿಮೆ ಆಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂಬ ಓದಿ : ರೈಲಿನಿಂದ ಇಳಿಯುವಾಗ ಥಾಣೆ ರೈಲು ನಿಲ್ದಾಣದಲ್ಲಿ ಹೃದಯಾಘಾತ – ಕಟಪಾಡಿ ಸುಧಾಕರ್ ಟಿ ಅಂಚನ್ ನಿಧನ
