ಆಸ್ತಿಗಾಗಿ ಸಾಕು ತಾಯಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ಮಗಳು – vishwanews24

Featured, ರಾಜ್ಯ ನ್ಯೂಸ್

ಆಸ್ತಿಗಾಗಿ ಸಾಕು ತಾಯಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ಮಗಳು

ಚಿಕ್ಕಮಗಳೂರು: ಆಸ್ತಿಗಾಗಿ ಮಗಳೇ ಸಾಕು ತಾಯಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್‌ಆರ್. ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಬಂಡಿಮಠ ಗ್ರಾಮದಲ್ಲಿ ನಡೆದಿದೆ.

ಮೃತ ತಾಯಿಯನ್ನು 62 ವರ್ಷದ ಕುಸುಮ ಎಂದು ಗುರುತಿಸಲಾಗಿದೆ. 35 ವರ್ಷದ ಸುಧಾ ತನ್ನ ಸಾಕು ತಾಯಿಯನ್ನ ಉಸಿರುಗಟ್ಟಿಸಿ ಕೊಲೆಗೈದ ಪಾಪಿ ಮಗಳು. ತಾಯಿಯನ್ನ ಕೊಲೆಗೈದಿದ್ದ ಮಗಳು ಆರಂಭದಲ್ಲಿ, ರಾತ್ರಿ ಮಲಗಿದ್ದವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರಿಗೆ ಕಥೆ ಕಟ್ಟಿದ್ದಳು. ಆದರೆ, ಪೊಲೀಸರ ತನಿಖೆಯ ಬಳಿಕ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.

ದೆಹಲಿ ಸ್ಫೋಟ: ದುರಂತಕ್ಕೆ ಕಾರಣರಾದವರನ್ನು ಸುಮ್ಮನೆ ಬಿಡುವುದಿಲ್ಲ: ರಾಜನಾಥ್ ಸಿಂಗ್ – vishwanews24

ಮೂಲತಃ ಹಾವೇರಿ ಜಿಲ್ಲೆಯವರಾದ ಕುಸುಮ ಬಹಳ ವರ್ಷಗಳ ಹಿಂದೆಯೇ ಬಾಳೆಹೊನ್ನೂರಿನ ಕಾಫಿ ತೋಟದಲ್ಲಿ ಕೆಲಸ ಮಾಡಿಕೊಂಡು ಇಲ್ಲೇ ವಾಸವಿದ್ದರು. ಮೃತ ಕುಸುಮಾಗೆ ಮಕ್ಕಳಿಲ್ಲದ ಕಾರಣ ತಂಗಿಯ ಮಗುವನ್ನು ತಾನೇ ಸಾಕುತ್ತಿದ್ದಳು. ಹಾವೇರಿಯಲ್ಲಿರುವ ಒಂದೂವರೆ ಎಕರೆ ಜಮೀನು ಹಾಗೂ ಒಂದು ಮನೆ ನನ್ನ ಕೈತಪ್ಪುತ್ತೆ ಎಂದು ಸುಧಾ, ರಾತ್ರಿ ಮಲಗಿದ್ದ ತಾಯಿಗೆ ತಲೆ ದಿಂಬಿನಿಂದ ಮುಖಕ್ಕೆ ಒತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ.

ಆರೋಪಿಯನ್ನು ಬಂಧಿಸಿರುವ ಬಾಳೆಹೊನ್ನೂರು ಪೊಲೀಸರು ಆಕೆಯನ್ನ ಜೈಲಗಟ್ಟಿದ್ದಾರೆ. ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳಾ ವಿಶ್ವಕಪ್ ಕಬಡ್ಡಿಯಲ್ಲಿ ಭಾರತೀಯ ತಂಡವನ್ನು ಪ್ರತಿನಿಧಿಸಲಿರುವ ಮಂಗಳೂರಿನ ಧನಲಕ್ಷ್ಮೀ ಪೂಜಾರಿ – vishwanews24

Leave a Reply