ಆಸ್ಪತ್ರೆಯಲ್ಲಿ ದಾಖಲಾತಿ ನಿರಾಕರಣೆ – ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ – Vishwanews24

Featured, ರಾಷ್ಟ್ರ ನ್ಯೂಸ್

ಆಸ್ಪತ್ರೆಯಲ್ಲಿ ದಾಖಲಾತಿ ನಿರಾಕರಣೆ – ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಆಂಧ್ರಪ್ರದೇಶ : ಆಸ್ಪತ್ರೆಗೆ ದಾಖಲಾತಿ ನಿರಾಕರಿಸಿದ್ದರಿಂದಾಗಿ ಮಹಿಳೆಯೊಬ್ಬರು ರಸ್ತೆಯಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಆಂಧ್ರಪ್ರದೇಶದ ತಿರುಪತಿಯಲ್ಲಿ ನಡೆದಿದೆ.

ಮಹಿಳೆಯೊಬ್ಬಳು ಆಸ್ಪತ್ರೆ ಆವರಣದಲ್ಲಿ ಭಾನುವಾರ ಬೆಳಗ್ಗೆಯಿಂದ ಓಡಾಡುತ್ತಿದ್ದಳು. ಆಕೆಯನ್ನು ಗರ್ಭಿಣಿ ಎಂದು ಗುರುತಿಸಲು ಸಾಧ್ಯವಾಗದ್ದರಿಂದ ಮತ್ತು ಆಕೆಯೊಂದಿಗೆ ಯಾರೂ ಇಲ್ಲದೇ ಇದ್ದುದರಿಂದ ಆಸ್ಪತ್ರೆ ಸಿಬಂದಿ ಆತಂಕದಿಂದಾಗಿ ಆಸ್ಪತ್ರೆಗೆ ದಾಖಲಿಸಲು ನಿರಾಕರಿಸಿದ್ದಾರೆ. ಆದರೆ ಸ್ವಲ್ಪ ಹೊತ್ತಿನಲ್ಲಿ ಆಕೆ ಆಸ್ಪತ್ರೆ ಮುಂಭಾಗದ ರಸ್ತೆಯಲ್ಲಿ ಹೆರಿಗೆ ನೋವಿನಿಂದ ನರಳಾಡುತ್ತಿದ್ದಳು. ಬಳಿಕ ಮಗುವಿನ ತಲೆ ಹೊರಗೆ ಬರುತ್ತಿರುವುದು ಕಂಡು ಬಂದಿದೆ. ಕೂಡಲೇ ಕೆಲವು ಮಹಿಳೆಯರು ಆಕೆಯ ಸಹಾಯಕ್ಕೆ ಧಾವಿಸಿ ಬೆಡ್‌ಶೀಟ್ ಅಡ್ಡ ಹಿಡಿದರು. ಅಷ್ಟರಲ್ಲಿ ವೈದ್ಯಾಧಿಕಾರಿ ಮತ್ತು ಆಸ್ಪತ್ರೆ ಹೆರಿಗೆ ಸಿಬಂದಿಯೂ ಅಲ್ಲಿಗೆ ಆಗಮಿಸಿ ಮಹಿಳೆಗೆ ನೆರವು ನೀಡಿದರು.

ಅಗ್ನಿಪಥ್ ಯೋಜನೆಯಡಿ ಅಗ್ನಿವೀರ್ ವಾಯು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾಳೆ ಕೊನೆಯ ದಿನ – Vishwanews24

ಬಳಿಕ ಮಹಿಳೆಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸಲಾಗಿದ್ದು, ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ತಾಯಿ-ಮಗು ಆರೋಗ್ಯವಾಗಿದ್ದರಿಂದ ಕೂಡಲೇ ಅದೇ ಆಸ್ಪತ್ರೆಗೆ ಆಕೆಯನ್ನು ದಾಖಲಿಸಲಾಯಿತು.

Leave a Reply