ಇಂಗ್ಲೀಷ್ ಪದ್ಯ ಹೇಳದ್ದಕ್ಕೆ 1ನೇ ತರಗತಿ ವಿದ್ಯಾರ್ಥಿಗೆ ಶಿಕ್ಷಕಿಯಿಂದ ಥಳಿತ

Featured, ಜಿಲ್ಲೆ

ತುಮಕೂರು: ಇಂಗ್ಲೀಷ್ ಪದ್ಯ ಹೇಳಿಲ್ಲ ಎಂದು ಶಿಕ್ಷಕಿಯೊಬ್ಬರು ವಿದ್ಯಾರ್ಥಿಗೆ ಬೆತ್ತದಿಂದ ಮನಸೋ ಇಚ್ಛೆ ಥಳಿಸಿರುವ ಘಟನೆ ಇಲ್ಲಿನ ಮಧುಗಿರಿ ತಾಲೂಕಿನ ಬ್ಯಾಲ್ಯ ಗ್ರಾಮದಲ್ಲಿ ನಡೆದಿದೆ.

ಒಂದನೇ ತರಗತಿ ವಿದ್ಯಾರ್ಥಿ ನಂದೀಶ್ ಇಂಗ್ಲಿಷ್ ಪದ್ಯ ಹೇಳಲು ಹಾಗೂ ಇಂಗ್ಲಿಷ್ ಅಕ್ಷರ ಬರೆಯಲು ತಡವರಿಸಿದ್ದಾನೆ. ಇದರಿಂದ ಕೋಪಗೊಂಡ ಶಿಕ್ಷಕಿ ಸೌಮ್ಯ  ಮನಸೋ ಇಚ್ಛೆ ಬೆತ್ತದಿಂದ ಥಳಿಸಿದ್ದಾರೆ. ಪರಿಣಾಮ ಬಾಲಕನ ಮೈಯಲ್ಲಿ ವಿಪರೀತ ಬಾಸುಂಡೆ ಎದ್ದಿದೆ. ಮನೆಗೆ ಬಂದ ಬಳಿಕ ಬಾಲಕ ಪೋಷಕರಿಗೆ ವಿಷಯ ತಿಳಿಸಿದ್ದಾನೆ.

ಸದ್ಯ ಬಾಲಕನಿಗೆ ಮಧುಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಲಕನಿಗೆ ಎದ್ವಾತದ್ವಾ ಥಳಿಸಿದ ಶಿಕ್ಷಕರ ವಿರುದ್ಧ ಪೋಷಕರು ಆಕ್ರೋಶ ವಕ್ತಪಡಿಸಿದ್ದಾರೆ.