ಇಂಡೋ-ಪಾಕ್​ ಟಿ20 ವಿಶ್ವಕಪ್​ ಪಂದ್ಯ : ತೀವ್ರ ಬೇಸರ ವ್ಯಕ್ತಪಡಿಸಿದ ಪೇಜಾವರ ಶ್ರೀ – Vishwanews24

Featured, ರಾಜ್ಯ ನ್ಯೂಸ್

ಇಂಡೋ-ಪಾಕ್​ ಟಿ20 ವಿಶ್ವಕಪ್​ ಪಂದ್ಯ : ತೀವ್ರ ಬೇಸರ ವ್ಯಕ್ತಪಡಿಸಿದ ಪೇಜಾವರ ಶ್ರೀಗಳು

ಭಾರತ-ಪಾಕ್ ಮ್ಯಾಚ್) ಅಗತ್ಯ ಉಂಟೋ? ಇಲ್ವೋ? ಪರಿಶೀಲನೆ ಮಾಡಲಿ ಎನ್ನುವುದು ನಮ್ಮ ಅಭಿಪ್ರಾಯ – ಪೇಜಾವರ ಶ್ರೀ ..

ಬಾಗಲಕೋಟೆ: ಅಕ್ಟೋಬರ್​ 24ರಂದು ಭಾರತ ಹಾಗೂ ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್​ ಪಂದ್ಯ ಹಿನ್ನಲೆಯಲ್ಲಿ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ಸ್ವಾಮೀಜಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕ್ರೀಡೆಯನ್ನು ಕ್ರೀಡೆಯನ್ನಾಗಿ ಸ್ವೀಕರಿಸಬೇಕು ಎನ್ನುವುದು ವಾಸ್ತವ. ಆದರೆ, ವಾಸ್ತವ ಎಲ್ಲವೂ ಸತ್ಯ ಆಗುತ್ತೋ? ಎಂದು ಪ್ರಶ್ನಿಸಿದರು. ಕ್ರೀಡೆಯನ್ನು ಕ್ರೀಡೆಯನ್ನಾಗಿ ನೋಡುವಂತೆ ಸಮಾಜವನ್ನು ರೂಪಿಸಿದ್ದೇವಾ ಎಂಬುದನ್ನು ಮೊದಲು ನೋಡಬೇಕೆಂದರು.

ದೋಂಬಿ, ಗಲಾಟೆ, ಗದ್ದಲ ಆಯಿತು ಎಂದ್ರೆ ಶಮನ ಮಾಡಲು ಯಾರಿಂದಲೂ ಆಗಲ್ಲ. ಸಾವು, ನೋವು ಆದ ಮೇಲೆ ಯಾರಿಗೆ ಉಪದೇಶ ಕೊಡಬೇಕು? ಕ್ರೀಡೆಯನ್ನ ಕ್ರೀಡೆಯಾಗಿ ಸ್ವೀಕರಿಸುವ ಗುಣ ಕ್ರೀಡಾಳುಗಳಲ್ಲೆ ಎಷ್ಟರ ಮಟ್ಟಿಗೆ ಇದೆ? ಕ್ರೀಡಾಂಗಣದಲ್ಲೇ ಹೊಡೆದಾಡಿಕೊಳ್ಳುವುದು, ಬೈದಾಡುವುದು ಹಾಗೂ ಅಸಭ್ಯವಾಗಿ ವರ್ತಿಸುವುದು ಯಾರು? ಕ್ರೀಡಾಳುಗಳಲ್ಲೆ ಇಷ್ಟರ ಮಟ್ಟಿಗೆ ಇದೆ ಅಂದರೆ, ಹೊರಗೆ ಇರುವುದರಲ್ಲಿ ಅಚ್ಚರಿಯಿಲ್ಲ ಅಂದರು.

ಮಂಗಳೂರು : ಆಸಿಯಾ ಮತಾಂತರ ಪ್ರಕರಣ : ಮೋಸ ಹೋದ ಮಹಿಳೆಗೆ ಕೊನೆಗೂ ಸಿಗಲಿಲ್ಲ ನ್ಯಾಯ ; ತನ್ನಿಷ್ಟದಂತೆ ಜೀವಿಸಲು ತೀರ್ಮಾನ – Vishwanews24

ಸಮಾಜವು ಪರಸ್ಪರ ದೊಂಬಿ, ಗಲಾಟೆಗೆ ಇಳಿದರೆ, ಅದರಿಂದಾಗುವ ಹಾನಿಗೆ ಪರಿಹಾರ ಹಾಗೂ ನಿವಾರಣೆ ಹೇಗೆ ಸಾಧ್ಯ? ಪಾಕಿಸ್ತಾನದ ಒಬ್ಬ ವ್ಯಾಪಾರಿ ಭಾರತದ ವಿರುದ್ಧ ಗೆದ್ದರೆ ಬ್ಲಾಂಕ್ ಚೆಕ್ ಕೊಡುವುದಾಗಿ ಹೇಳಿದ್ದಾನಂತೆ. ಆ ದೇಶ ಕ್ರಿಕೆಟ್​ ಅನ್ನು ಹಾಗೆಯೇ ಸ್ವೀಕರಿಸಿದೆ. ಇದೊಂದು ಯುದ್ಧ ಅಂತಾ ಹೇಳಿಕೊಂಡು ಓಡಾಡುತ್ತಿವೆ ಎಂದು ಪಾಕ್​ ವಿರುದ್ಧ ಕಿಡಿಕಾರಿದರು.

ನಮ್ಮಲ್ಲಿ ಸಹ ಅಲ್ಲಲ್ಲಿ ಯುವಕರ ಗುಂಪುಗಳು ಸೋಲು-ಗೆಲುವನ್ನು ಸ್ವೀಕರಿಸುವ ಪರಿ ಹೇಗಿದೆ? ಪರಸ್ಪರ ಹೊಡೆದಾಟ, ನಿಂದನೆ ಆಗ್ತಿವೆ. ಕ್ರೀಡೆಯನ್ನು ಕ್ರೀಡೆಯಾಗಿ ಸ್ವೀಕರಿಸುವ ಮನೋಭಾವ ಕ್ರೀಡಾಪಟುಗಳು, ಪ್ರಜೆಗಳು, ಸಮಾಜದಲ್ಲಿ ಇದೆಯೇ? ಇಷ್ಟು ವಿಕೋಪಕ್ಕೆ ಹೋಗುತ್ತೆ ಅಂದ್ರೆ, ಅದರ(ಭಾರತ-ಪಾಕ್ ಮ್ಯಾಚ್) ಅಗತ್ಯ ಉಂಟೋ? ಇಲ್ವೋ? ಪರಿಶೀಲನೆ ಮಾಡಲಿ ಎನ್ನುವುದು ನಮ್ಮ ಅಭಿಪ್ರಾಯವಾಗಿದೆ ಎಂದರು.

ಉಚಿತ ಲಸಿಕೆ, ಇತರ ಯೋಜನೆಗಳಿಗೆ ಇಂಧನದ ಮೇಲಿನ ತೆರಿಗೆ ಹಣ ಬಳಕೆ : ಹರ್‌ದೀಪ್‌‌ ಸಿಂಗ್‌ ಪುರಿ – Vishwanews24