ಇಂದಿನ ದಿನ ಭವಿಷ್ಯ : 18-11-2021 -Vishwanews24
ಇಂದಿನ ದಿನ ಭವಿಷ್ಯ : 18-11-2021 -Vishwanews24
ಮೇಷ : ವಿದ್ಯಾರ್ಥಿಗಳ ಪ್ರಯತ್ನಗಳು ಅವರ ಕೈ ಹಿಡಿಯಲಿದೆ. ಎಂತಹ ಸಂದಿಗ್ದ ಪರಿಸ್ಥಿತಿಯಲ್ಲಿಯೂ ನಿಮ್ಮ ಸಂಸ್ಕಾರವನ್ನು ಮರೆಯಬೇಡಿ.
ವೃಷಭ : ಸಾರ್ವಜನಿಕ ವಲಯದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ಉದ್ಯಮದಲ್ಲಿ ನಿಮಗೆ ಆತ್ಮವಿಶ್ವಾಸ ಹೆಚ್ಚಲಿದೆ. ಭೂ ವಾಜ್ಯಗಳು ಸರಿ ಹೋಗಲಿವೆ. ನೀವು ಪಟ್ಟಿರುವ ಕನಸು ಈಡೇರುವ ಕಾಲ ಸನ್ನಿಹಿತವಾಗಲಿದೆ.
ಮಿಥುನ : ಉದ್ಯಮ ವಿಸ್ತರಣೆ ಮಾಡುವ ಬಗ್ಗೆ ಪೋಷಕರೊಂದಿಗೆ ಚರ್ಚೆ ನಡೆಸುವಿರಿ. ಮನೆಯಲ್ಲಿ ನಿಮ್ಮ ಮದುವೆ ವಿಚಾರದ ಪ್ರಸ್ತಾಪ ಕೇಳಿ ಬರಲಿದೆ.
ಕಟಕ : ಇಂದು ನೀವು ಪ್ರಭಾವಿ ವ್ಯಕ್ತಿಗಳ ಸಂಪರ್ಕವನ್ನು ಸಾಧಿಸಲಿದ್ದೀರಿ. ಈ ವ್ಯಕ್ತಿಯು ನಿಮ್ಮ ಅನೇಕ ಸಮಸ್ಯೆಗಳಿಗೆ ಪರಿಹಾರ ಹುಡುಕಿಕೊಡಲಿದ್ದಾರೆ. ವೃತ್ತಿ ಜೀವನದಲ್ಲಿ ಯಶಸ್ಸು ಕಾದಿದೆ.
ಸಿಂಹ : ಉದ್ಯಮದಲ್ಲಿ ನಿಮಗೆ ಉತ್ತಮ ಫಲಿತಾಂಶ ಸಿಗಲಿದೆ. ಸಂಬಳಕ್ಕೆ ಕೆಲಸ ಮಾಡುವವರು ಇಂದು ಹೆಚ್ಚಿನ ಒತ್ತಡ ಎದುರಿಸಬೇಕಾದೀತು.
ಕನ್ಯಾ : ಯಾರೋ ತಪ್ಪು ಮಾಡ್ತಿದ್ದಾರೆ ಎಂದು ನೀವೂ ಮಾಡಿದರೆ ನಿಮಗೂ ಅವರಿಗೂ ವ್ಯತ್ಯಾಸ ಇರೋದಿಲ್ಲ. ನಿಮ್ಮ ಆತ್ಮಸಾಕ್ಷಿಗೆ ಧಕ್ಕೆ ಉಂಟಾಗುವಂತಹ ಘಟನೆಗಳು ಕಚೇರಿಯಲ್ಲಿ ನಡೆಯಲಿದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.
ತುಲಾ : ವೈದ್ಯಕೀಯ ರಂಗದಲ್ಲಿ ಇರುವವರು ಇಂದು ಮೆಚ್ಚುಗೆ ಗಳಿಸಲಿದ್ದಾರೆ. ಗೆಳೆಯರ ಗುಂಪಿನಲ್ಲಿ ನಿಮಗೆ ಡಿಮ್ಯಾಂಡ್ ಹೆಚ್ಚಲಿದೆ. ಉತ್ತಮ ಜನರ ಸಂಪರ್ಕ ಸಾಧಿಸಲಿದ್ದೀರಿ.
ವೃಶ್ಚಿಕ : ಏನೋ ಮಾಡಲು ಹೋಗಿ ಇರೋದನ್ನೂ ಕಳೆದುಕೊಳ್ಳಬೇಡಿ. ಮೂಗಿನ ನೇರಕ್ಕೆ ಯೋಚನೆ ಮಾಡೋದನ್ನು ನಿಲ್ಲಿಸಿ. ಇದರಿಂದ ನಿಮಗೂ ನಷ್ಟವಿದೆ.
ಧನು : ಸಂಗಾತಿಯ ನಿರ್ಲಕ್ಷ್ಯ ಬುದ್ಧಿಯು ನಿಮಗೆ ಹತಾಶೆ ಮೂಡುವಂತೆ ಮಾಡಲಿದೆ. ಇದು ನಿಮ್ಮ ದಾಂಪತ್ಯ ಜೀವನದಲ್ಲಿ ಬಿರುಕಿಗೆ ಕಾರಣವಾಗಬಹುದು.
ಮಕರ : ನಿಮ್ಮ ಇಷ್ಟಾರ್ಥಗಳು ಒಂದೊಂದಾಗಿಯೇ ನೆರವೇರಲಿದೆ. ವ್ಯಾಪಾರಿಗಳಿಗೆ ಇಂದು ಲಾಭವಿದೆ. ವಿದೇಶಕ್ಕೆ ಹೋಗಬೇಕು ಎಂಬ ನಿಮ್ಮ ಕನಸು ನನಸಾಗುವ ದಿನಗಳು ಹೆಚ್ಚು ದೂರವಿಲ್ಲ.
ಕುಂಭ : ಕಚೇರಿ ಕೆಲಸಕ್ಕೆಂದು ವಿದೇಶ ಪ್ರಯಾಣ ಕೈಗೊಂಡ ನೀವು ಅತಿಯಾಗಿ ದಣಿಯಲಿದ್ದೀರಿ. ಪ್ರಭಾವಿ ವ್ಯಕ್ತಿಗಳನ್ನು ಭೇಟಿ ಮಾಡಲಿದ್ದೀರಿ.
ಮೀನ : ಅಧಿಕಾರಿಗಳೊಂದಿಗೆ ಯಾವುದೇ ಕಾರಣಕ್ಕೂ ಘರ್ಷಣೆಗೆ ಇಳಿಯಬೇಡಿ. ಹಾಗಾದಲ್ಲಿ ಮಾತ್ರ ನಿಮಗೆ ಪ್ರಗತಿ ಇದೆ.
