ಇಂದಿನ ನಟಿಯರು ನಮಗಿಂತ ಹೆಚ್ಚು ಹಣ ದುಡಿಯುತ್ತಾರೆ ಆದರೆ ನಮಗೆ ಅವರಿಗಿಂತ ಹೆಚ್ಚು ಗೌರವ ಸಿಗುತ್ತಿತ್ತು : ನಟಿ ಸುಹಾಸಿನಿ – vishwanews24
ಇಂದಿನ ನಟಿಯರು ನಮಗಿಂತ ಹೆಚ್ಚು ಹಣ ದುಡಿಯುತ್ತಾರೆ ಆದರೆ ನಮಗೆ ಅವರಿಗಿಂತ ಹೆಚ್ಚು ಗೌರವ ಸಿಗುತ್ತಿತ್ತು : ನಟಿ ಸುಹಾಸಿನಿ
ಬೆಂಗಳೂರು : ದಕ್ಷಿಣ ಭಾರತದ ಖ್ಯಾತ ನಟಿ ಸುಹಾಸಿನಿ ಇಂದಿನ ಕಾಲದ ನಾಯಕ ನಟಿಯರ ಬಗ್ಗೆ ಮಾತನಾಡಿದ್ದಾರೆ.ಇಂದಿನ ತಲೆಮಾರಿನ ನಟಿಯರು ನಮಗಿಂತ ಹೆಚ್ಚು ಹಣ ದುಡಿಯುತ್ತಾರೆ. ಆದರೆ, ನಮಗೆ ಅವರಿಗಿಂತ ಹೆಚ್ಚು ಗೌರವ ಸಿಗುತ್ತಿತ್ತು ಎಂಬ ಹೇಳಿಕೆಯನ್ನು ನಟಿ ಸುಹಾಸಿನಿ ನೀಡಿದ್ದಾರೆ.
ಅವರ ಪಾತ್ರದಲ್ಲಿ ಹೆಣ್ಣಿನ ಮನಸ್ಸನ್ನು ಬಹಳ ಅರ್ಥಗರ್ಭಿತವಾಗಿ, ಆಳವಾಗಿ ಚಿತ್ರಿಸಲಾಗುತ್ತಿತ್ತು. ಹೀರೋಯಿನ್ ಎಂದರೆ ಆಕೆಯಲ್ಲಿ ಒಬ್ಬ ತಾಯಿಯಿರುತ್ತಿದ್ದಳು, ತಾಳ್ಮೆಯ ಪ್ರತಿರೂಪವಾಗಿರುತ್ತಿದ್ದಳು, ಮತ್ತೊಬ್ಬರನ್ನು ನೋಯಿಸದ ಸ್ವಭಾವ ತೋರಿಸಲಾಗುತ್ತಿತ್ತು.ಈಗ ಬಹುತೇಕ ಸಿನಿಮಾಗಳಲ್ಲಿ ಹೀರೋಯಿನ್ಗೆ ಇಂಥ ಯಾವ ಗುಣವೂ ಬೇಕಿಲ್ಲ. ಆಕೆ ಚೆನ್ನಾಗಿ ಕಾಣಿಸಿಕೊಂಡು, ಕುಣಿದು, ಒಂದೆರಡು ಡೈಲಾಗ್ ಹೇಳಿದರೆ ಸಾಕು. ಕ್ರೈಮೇ ಸಿನಿಮಾ ಜೀವಾಳ ಆಗಿರುವ ಕತೆಗಳಲ್ಲಂತೂ ಹೆಸರಿಗಷ್ಟೇ ಹೀರೋಯಿನ್.
ಅವಳ ಮನೋಭಾವ ನೋಡುಗರನ್ನು ಬಹುವಾಗಿ ಪ್ರಭಾವಿಸುವಂತಿರುತ್ತಿತ್ತು, ಅವಳ ಸಹೃದಯಕ್ಕೆ ಸರಿಸಾಟಿ ಇರಲಿಲ್ಲ. ನೋಡಿದ ಹೆಣ್ಣುಮಕ್ಕಳು ತಾವೂ ಹೀಗಿರಬೇಕೆಂದುಕೊಳ್ಳುವಂಥ ಆದರ್ಶ ಮಹಿಳೆ ಅವರಾಗಿರುತ್ತಿದ್ದರು, ಪುರುಷರು ತಮಗಿಂತ ಪತ್ನಿ ದೊರೆಯಲೆಂದು ಪ್ರಾರ್ಥಿಸುವಂತೆ ಹೀರೋಯಿನ್ಗಳನ್ನು ಚಿತ್ರಿಸಲಾಗುತ್ತಿತ್ತು ಎಂದಿದ್ದಾರೆ.
