ಇಂದಿನಿಂದ ಬಿಜೆಪಿ ಜನಸಂಪರ್ಕ ಸಭೆ ಪುನರಾರಂಭ  :  ಉಡುಪಿಯಲ್ಲೂ ಜನ ಸಂಕಲ್ಪ ಯಾತ್ರೆ – Vishwanews24

Featured, ರಾಜ್ಯ ನ್ಯೂಸ್

ಇಂದಿನಿಂದ ಬಿಜೆಪಿ ಜನಸಂಪರ್ಕ ಸಭೆ ಪುನರಾರಂಭ  :  ಉಡುಪಿಯಲ್ಲೂ ಜನ ಸಂಕಲ್ಪ ಯಾತ್ರೆ

ಬೆಂಗಳೂರು: ಇಂದಿನಿಂದ ಮತ್ತೆ ಎರಡನೇ ಹಂತದ ಬಿಜೆಪಿ ಜನಸಂಕಲ್ಪಯಾತ್ರೆ ಆರಂಭವಾಗಲಿದೆ. ಸತತ ಮೂರು ದಿನ ಕಾರ್ಯಕ್ರಮಗಳಿವೆ. ಸಿಎಂ ಬಸವರಾಜ ಬೊಮ್ಮಾಯಿ, ಬಿಎಸ್ ಯಡಿಯೂರಪ್ಪ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ.

ಉಡುಪಿ, ಗದಗ, ಹಾವೇರಿ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ಜನಸಂಕಲ್ಪ ಯಾತ್ರೆ ನಡೆಯಲಿದೆ.

ಇಂದು ದೆಹಲಿಯಿಂದ ಬೆಂಗಳೂರಿಗೆ ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಆಗಮಿಸಲಿದ್ದಾರೆ. ನ.8ರಿಂದ 11ರವರೆಗೆ ಕಲಬುರಗಿ, ಸಿಂದಗಿ, ದಾವಣಗೆರೆ, ತುಮಕೂರಲ್ಲಿ ನಡೆಯುವ ಜನಸಂಕಲ್ಪ ಯಾತ್ರೆಯಲ್ಲಿ ಅರುಣ್​ ಸಿಂಗ್​ ಭಾಗಿಯಾಗಲಿದ್ದಾರೆ. ಡಿಸೆಂಬರ್‌ವರೆಗೆ ಜನಸಂಕಲ್ಪ ಯಾತ್ರೆ ಮುಂದುವರಿಯಲಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನವೆಂಬರ್‌ 11ರಂದು ರಾಜ್ಯಕ್ಕೆ ಆಗಮಿಸಲಿದ್ದು, ಮೂರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ವಂದೇ ಭಾರತ್‌ ಚೆನ್ನೈ- ಮೈಸೂರು- ಬೆಂಗಳೂರು ರೈಲನ್ನು ಉದ್ಘಾಟಿಸಲಿದ್ದಾರೆ.

ಶಿವಮೊಗ್ಗ: ಬೈಕ್-ಕಾರು ಮುಖಾಮುಖಿ ಢಿಕ್ಕಿ : ಮಗು ಸೇರಿ ಒಂದೇ ಕುಟುಂಬದ ಮೂವರ ದುರ್ಮರಣ – Vishwanews24

Leave a Reply