ಇಂದಿನಿಂದಲೇ ರಾಜ್ಯಾದ್ಯಂತ ಬಾರ್, ರೆಸ್ಟೋರೆಂಟ್ ಓಪನ್ : ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್ -Vishwanews24
ಇಂದಿನಿಂದಲೇ ರಾಜ್ಯಾದ್ಯಂತ ಬಾರ್, ರೆಸ್ಟೋರೆಂಟ್ ಓಪನ್ : ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್ -Vishwanews24
ಬೆಂಗಳೂರು : ಕಳೆದ 5 ತಿಂಗಳಿಂದ ಕೊರೋನಾ ಸೋಂಕಿನ ಭೀತಿಯಿಂದಾಗಿ ಮುಚ್ಚಲ್ಪಟ್ಟಿದ್ದಂತ ಬಾರ್ ಅಂಡ್ ರೆಸ್ಟೋರೆಂಟ್ ಗಳನ್ನು ಇಂದಿನಿಂದ ರಾಜ್ಯಾದ್ಯಂತ ಓಪನ್ ಮಾಡೋದಕ್ಕೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಈ ಮೂಲಕ ಮದ್ಯ ಪ್ರಿಯರಿಗೆ ಸಿಹಿ ಸುದ್ದಿ ನೀಡಿದೆ.
ರಾಜ್ಯದಲ್ಲಿ ಕೊರೋನಾ ಸೋಂಕಿನ ಭೀತಿಯಿಂದಾಗಿ ವೈನ್ ಶಾಪ್ ಹಾಗೂ ಎಂಎಸ್ಐಎಲ್ ತೆರೆಯಲು ಮಾತ್ರವೇ ಅವಕಾಶ ನೀಡಿತ್ತು. ಆದರೇ ಬಾರ್ ಅಂಡ್ ರೆಸ್ಟೋರೆಂಟ್ ತೆರೆಯೋದಕ್ಕೆ ಅವಕಾಶ ನೀಡಿರಲಿಲ್ಲ. ಇಂತಹ ಬಾರ್ ಅಂಡ್ ರೆಸ್ಟೋರೆಂಟ್ ಇಂದಿನಿಂದ ತೆರೆಯಲು ಕೆಲ ಷರತ್ತುಗೊಂದಿಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.
ಬಾರ್ ಗಳಲ್ಲಿ ಶೇ.50ರಷ್ಟು ಗ್ರಾಹಕರಿಗೆ ಮಾತ್ರವೇ ಅವಕಾಶ, ಆಹಾರದ ಜೊತೆಗೆ ಮದ್ಯ ಪೂರೈಕೆಗೂ ಸರ್ಕಾರ ಅಸ್ತು ನೀಡಿದೆ. ಸಾಮಾಜಿಕ ಅಂತರ ಸೇರಿದಂತೆ ಎಲ್ಲಾ ಷರತ್ತು ಅನ್ವಯ. ಕೊರೋನಾ ಹಿನ್ನಲೆಯಲ್ಲಿ ಎಲ್ಲಾ ಮುಂಜಾಗ್ರತ ಕ್ರಮ ಅನುಸರಿಸುವ ಮೂಲಕ ರಾಜ್ಯಾಧ್ಯಂತ ಇಂದಿನಿಂದ ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಲಿವೆ.
