ಇಂದು ಈ ವರ್ಷದ ಅತೀ ದೊಡ್ಡ ಸೂಪರ್ ಮೂನ್ ಗೋಚರ..Vishwanews24
ಚಂದಿರ ಭೂಮಿಗೆ ತೀರಾ ಹತ್ತಿರವಾಗಿ ಸುತ್ತು ಹಾಕುವ ಪ್ರಕ್ರಿಯೆಯನ್ನು ವಿಜ್ಞಾನಿಗಳು ಸೂಪರ್ ಮೂನ್ ಎಂದು ಕರೆಲಾಗುತ್ತದೆ. ಕಳೆದ ತಿಂಗಳ ಸೂಪರ್ ಮೂನ್ಗಿಂತ ಸುಮಾರು 362 ಮೈಲಿಗಳಷ್ಟು ಹತ್ತಿರದಿಂದ ಚಂದಿರ ಭೂಮಿಯನ್ನ ಸುತ್ತು ಹಾಕಲಿದ್ದಾನೆ. ಇಂದಷ್ಟೇ ಅಲ್ಲ ಮುಂದಿನ ಮಾರ್ಚ್ನಲ್ಲೂ ಚಂದಿರ ಭೂಮಿಗೆ ಸಮೀಪದಲ್ಲಿ ತಿರುಗಲಿದ್ದಾನೆ.
ಇಂದಿನ ಈ ಚಂದಿರನನ್ನ ನಾಸಾ ಸ್ನೋ ಮೂನ್ ಹಾಗೂ ಹಂಗರ್ ಮೂನ್ ಎಂದು ಕರೆದಿದೆ. ವಿಶೇಷವಾಗಿ ಈ ಅವಧಿಯಲ್ಲಿ ಚಳಿಗಾಲದ ಮಂಜು ಸುರಿಯುವ ಹಿನ್ನೆಲೆಯಲ್ಲಿ ಈ ಹುಣ್ಣಿಮೆಗೆ ಸ್ನೋ ಮೂನ್ ಎಂದು ಹೆಸರಿಸಿದೆ. ಇವತ್ತಿನ ಈ ಕೌತುಕ ಹೆಚ್ಚು ಕಡಿಮೆ ಅಮೆರಿಕದಲ್ಲೇ ಜಾಸ್ತಿ ಕಾಣಿಸಿಕೊಳ್ಳಲಿದೆ.
ಏನಿದು ಸೂಪರ್ ಮೂನ್ ??
ಚಂದ್ರನು ತುಂಬಾ ಬೃಹತ್ ಆಕಾರದಲ್ಲಿ ಕಾಣಿಸಿಕೊಂಡಾಗ ಅದನ್ನು ಸೂಪರ್ ಮೂನ್ ಎಂದು ಕರೆಯಲಾಗುತ್ತದೆ. ಯಾಕೆಂದರೆ ಚಂದ್ರನು ಈ ಸಮಯದಲ್ಲಿ ತನ್ನ ಕಕ್ಷೆಯಲ್ಲಿ ಭೂಮಿಗೆ ತುಂಬಾ ಹತ್ತಿರವಾಗಿ ಇರುವನು. ಪ್ರತೀ ತಿಂಗಳಲ್ಲಿ ಒಂದು ಸಲ ಸೂಪರ್ ಮೂನ್ ಕಾಣಿಸಿಕೊಳ್ಳುವುದು. ಈ ಸಮಯದಲ್ಲಿ ಚಂದ್ರನು ಬೃಹತ್ ಆಕಾರ ಮತ್ತು ಪ್ರಕಾಶಮಾನವಾಗಿ ಕಾಣಿಸುವನು.
