ಇಂದು ದೆಹಲಿ ನೂತನ ಸಿಎಂ ಆಗಿ ಆಮ್ ಆದ್ಮಿ ಪಕ್ಷ ದ ಆತಿಶಿ ಪ್ರಮಾಣವಚನ ಸ್ವೀಕಾರ – vishwanews24
ಇಂದು ದೆಹಲಿ ನೂತನ ಸಿಎಂ ಆಗಿ ಆಮ್ ಆದ್ಮಿ ಪಕ್ಷ ದ ಆತಿಶಿ ಪ್ರಮಾಣವಚನ ಸ್ವೀಕಾರ
ನವದೆಹಲಿ: ದೆಹಲಿ ನೂತನ ಮುಖ್ಯಮಂತ್ರಿಯಾಗಿ ಆಮ್ ಆದ್ಮಿ ಪಕ್ಷ ದ ಆತಿಶಿ ಇಂದು (ಸೆ.21) ಅಧಿಕಾರ ಸ್ವೀಕರಿಸಲಿದ್ದಾರೆ. ಅವರೊಂದಿಗೆ ಐದು ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ರಾಜಭವನದಲ್ಲಿ ಸಂಜೆ 4.30ಕ್ಕೆ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. ಅತಿಶಿ ಜೊತೆಗೆ ಆಪ್ ನ ಹಿರಿಯರಾದ ಗೋಪಾಲ್ ರೈ, ಕೈಲಾಶ್ ಗಹ್ಲೋಟ್, ಸೌರಭ್ ಭಾರದ್ವಾಜ್, ಮುಖೇಶ್ ಅಹ್ಲಾವತ್ ಮತ್ತು ಇಮ್ರಾನ್ ಹುಸೇನ್ ಕೂಡ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ದಲಿತ ನಾಯಕ ಮುಖೇಶ್ ಅಹ್ಲಾವತ್ ಅವರು ದಿಲ್ಲಿ ಕ್ಯಾಬಿನೆಟ್ಗೆ ಹೊಸದಾಗಿ ಪ್ರವೇಶಿಸುತ್ತಿದ್ದಾರೆ. ಸುಲ್ತಾನ್ಪುರ ಮಜ್ರಾದಿಂದ ಅವರು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಉಡುಪಿ : ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಗುಡ್ಡಕ್ಕೆ ಡಿಕ್ಕಿ ಹೊಡೆದ ಕಾರು – vishwanews24
