ಇಂದು ಬಿಡುಗಡೆಗೆ ಸಿದ್ದವಾಗಿದ್ದ ‘ಪಿಲಿ’ ತುಳುಚಿತ್ರ ಪ್ರದರ್ಶನಕ್ಕೆ ನ್ಯಾಯಾಲಯ ತಡೆಯಾಜ್ಞೆ – Vishwanews24

Featured, ಉಡುಪಿ

ಇಂದು ಬಿಡುಗಡೆಗೆ ಸಿದ್ದವಾಗಿದ್ದ ‘ಪಿಲಿ’ ತುಳುಚಿತ್ರ ಪ್ರದರ್ಶನಕ್ಕೆ ನ್ಯಾಯಾಲಯ ತಡೆಯಾಜ್ಞೆ

ಉಡುಪಿ : ಕರಾವಳಿಯಾದ್ಯಂತ ಇಂದು ತೆರೆಗೆ ಸಿದ್ದವಾಗಿರುವ “ಪಿಲಿ” ತುಳು ಚಿತ್ರ ಥಿಯೇಟರ್‍ಗಳಲ್ಲಿ ಪ್ರದರ್ಶನ ಕಾಣದಂತೆ ನ್ಯಾಯಾಲಯದಿಂದ ತಡೆ ನೀಡಲಾಗಿದೆ.

ಈ ಚಿತ್ರಕ್ಕೆ 40 ಲಕ್ಷ ಬಂಡವಾಳ ಹೂಡಿದ ನಿರ್ಮಾಪಕ ಮಂಜೀತ್ ನಾಗರಾಜ್ ಅವರನ್ನು ಕಡೆಗಣಿಸಿ ಬೇರೆ ನಿರ್ಮಾಪಕರ ಹೆಸರನ್ನು ಬಳಸಿಕೊಂಡು ಚಿತ್ರ ಬಿಡುಗಡೆಗೆ ಸಿದ್ದತೆ ಮಾಡಿಕೊಂಡಿದ್ದಾರೆ. ಆದ್ದರಿಂದ ಈ ಚಿತ್ರ ಪ್ರದರ್ಶನ ಕಾಣದಂತೆ ತಡೆ ನೀಡುವಂತೆ ನಿರ್ಮಾಪಕ ಮಂಜೀತ್ ನಾಗರಾಜ್ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಇದೀಗ ನಿರ್ಮಾಪಕ ಮಂದೀಪ್ ಅವರ ಮನವಿ ಪುರಸ್ಕರಿಸಿದ ನ್ಯಾಯಾಲಯವು ನಾಳೆ ಬಿಡುಗಡೆಗೊಳ್ಳಲಿರುವ “ಪಿಲಿ” ಚಿತ್ರದ ಪ್ರದರ್ಶನವನ್ನು ತಡೆ ಹಿಡಿದಿದೆ.

ಕಾಪು : ಪಾಂಗಾಳ ಶರತ್‌ ಶೆಟ್ಟಿ ಕೊಲೆ ಪ್ರಕರಣ : ಪೊಲೀಸರಿಗೆ ಮಹತ್ವದ ಸುಳಿವು ಲಭ್ಯ ? Vishwanews24

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಭರತ್ ಭಂಡಾರಿ ಅವರು ಚಿತ್ರದ ನಿರ್ಮಾಣಕ್ಕಾಗಿ ನನ್ನಿಂದ 40 ಲಕ್ಷ ಬಂಡವಾಳ ಪಡೆದು ಮೊದಲ ಹಂತದ ಚಿತ್ರೀಕರಣ ಮುಗಿದ ಬಳಿಕ ಹಣ ಪಡೆದು ಚಿತ್ರೀಕರಣ ಪೂರ್ಣಗೊಳಿಸಿ ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು. ಆದರೀಗ ಬೇರೆ ಯಾವುದೋ ನಿರ್ಮಾಪಕರ ಹೆಸರು ಹಾಕಿಕೊಂಡು ಚಿತ್ರ ಬಿಡುಗಡೆ ಮಾಡುತ್ತಿದ್ದಾರೆ. ಈ ಮೂಲಕ ನನಗೂ ಹಾಗೂ ಹಣ ನೀಡಿದ ಇತರ ಸಹನಿರ್ಮಾಪಕರಿಗೂ ವಂಚಿಸಿದ್ದಾರೆ” ಎಂದು ನಿರ್ಮಾಪಕ ಮಂಜೀತ್ ನಾಗರಾಜ್ ಅವರು ಆರೋಪಿಸಿದ್ದಾರೆ.

‘ಪಿಲಿ’ ಚಿತ್ರ ಪ್ರದರ್ಶನ ಮಾಡದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವುದಾಗಿ ಅವರು ತಿಳಿಸಿದ್ದಾರೆ.

ಕಾಪು : ಪಾಂಗಾಳ ಶರತ್‌ ಶೆಟ್ಟಿ ಕೊಲೆ ಪ್ರಕರಣ : ಪೊಲೀಸರಿಗೆ ಮಹತ್ವದ ಸುಳಿವು ಲಭ್ಯ ? Vishwanews24

Leave a Reply