ಇಡೀ ದೇಶ ನಮ್ಮ ವಿಧಾನಸಭೆ ಕಡೆ ತಿರುಗಿ ನೋಡುವಂತೆ ಸಂವಿಧಾನ ನಿಷ್ಟರಾಗಿ ಕಾರ್ಯ ನಿರ್ವಹಿಸಬೇಕು : ನೂತನ ಸಭಾಧ್ಯಕ್ಷರಿಗೆ ಮಾಜಿ ಸ್ಪೀಕರ್ ರಮೇಶ್‍ಕುಮಾರ್ ಸಲಹೆ -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು: ಇಡೀ ದೇಶ ನಮ್ಮ ವಿಧಾನಸಭೆ ಕಡೆ ತಿರುಗಿ ನೋಡುವಂತೆ ಸಂವಿಧಾನ ನಿಷ್ಟರಾಗಿ ಕಾರ್ಯ ನಿರ್ವಹಿಸಬೇಕೆಂದು ನೂತನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮಾಜಿ ಸ್ಪೀಕರ್ ರಮೇಶ್‍ಕುಮಾರ್ ಸಲಹೆ ನೀಡಿದರು.

ವಿಧಾನಸಭೆಯಲ್ಲಿ ಅವಿರೋಧವಾಗಿ ಸಭಾಧ್ಯಕ್ಷರಾಗಿ ಆಯ್ಕೆಯಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಅಭಿನಂದಿಸಿ ಮಾತನಾಡಿದ ಅವರು, ಸಭಾಧ್ಯಕ್ಷರ ಸ್ಥಾನದ ಗೌರವ ಹೆಚ್ಚುವ ರೀತಿಯಲ್ಲಿ ಜನರ ವಿಚಾರಗಳು ಹೆಚ್ಚು ಚೆರ್ಚೆಯಾಗಬೇಕು ಎಂದು ಹೇಳಿದರು.

ಧ್ವನಿ ಇಲ್ಲದವರ ಹಾಗೂ ಜನರ ವಿಚಾರದ ಬಗ್ಗೆ ಹೆಚ್ಚು ಅವಕಾಶ ದೊರೆಯಬೇಕು. ಸಂಸದೀಯ ವೇದಿಕೆಗಳಲ್ಲಿ ರಜೆಯ ವಿಚಾರ ಚರ್ಚೆಯಾಗುವುದಿಲ್ಲ ಎಂಬುದನ್ನು ದೂರ ಮಾಡಬೇಕು.

ಅಂಬೇಡ್ಕರ್ ಅವರು ಸಮಾನತೆ ಆಧಾರದ ಮೇಲೆ ಅಖಂಡ ಭಾರತ ಇರಬೇಕು ಎಂದು ಪ್ರತಿಪಾದಿಸಿದವರು. ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ಶಾಸನ ಸಭೆ ಆರಂಭಗೊಂಡಿದ್ದು ಎಂದು ಅದರ ಇತಿಹಾಸವನ್ನು ಮೆಲುಕು ಹಾಕಿದರು.

ಹಣಕಾಸಿನ ವಿಚಾರದಲ್ಲೂ ಕೂಡ ಎಚ್ಚರಿಕೆಯಿಂದ ಇದ್ದವರು. ಪ್ರಾಮಾಣಿಕರಾಗಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಾರ್ವಜನಿಕರ ಹಿತದೃಷ್ಟಿಯಿಂದ ನಿಮ್ಮ ನೋವು ಹಂಚಿಕೊಳ್ಳಲು ನಿಮ್ಮೊಂದಿಗೆ ಇರುವುದಾಗಿ ಹೇಳಿ ರಮೇಶ್‍ಕುಮಾರ್ ನೂತನ ಸ್ಪೀಕರ್ ಅವರನ್ನು ಅಭಿನಂದಿಸಿದರು.