ಇದು ಕರಾಳ ದಿನ : ಪವರ್ ಸ್ಟಾರ್ ನಿಧನಕ್ಕೆ ಕಂಬನಿ ಮಿಡಿದ ಅಮಿತಾಬ್ ಬಚ್ಚನ್ – VIshwanews24

Featured, ರಾಷ್ಟ್ರ ನ್ಯೂಸ್

ಇದು ಕರಾಳ ದಿನ : ಪವರ್ ಸ್ಟಾರ್ ನಿಧನಕ್ಕೆ ಕಂಬನಿ ಮಿಡಿದ ಅಮಿತಾಬ್ ಬಚ್ಚನ್ – VIshwanews24

ಮುಂಬೈ: ನಟ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನ ಭಾರತೀಯ ಚಿತ್ರರಂಗವನ್ನು ಆಘಾತಕ್ಕೆ ದೂಡಿದೆ. ಕನ್ನಡದ ಪವರ್ ಸ್ಟಾರ್ ನಿಧನಕ್ಕೆ ಅನ್ಯ ಭಾಷೆಯ ನಟರೂ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಬಾಲಿವುಡ್ ದಿಗ್ಗಜ ಅಮಿತಾಭ್ ಬಚ್ಚನ್ ಅವರು ‘ಇದು ಕರಾಳ ದಿನ’ ಎಂದಿದ್ದಾರೆ.

ಪುನೀತ್ ಸಾವಿಗೆ ಸಂತಾಪ ಸೂಚಿಸಿ ಬಿಗ್ ಬಿ ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ. “ಕನ್ನಡ ಚಿತ್ರರಂಗದ ದಿಗ್ಗಜ ರಾಜ್ ಕುಮಾರ್ ಅವರ ಕಿರಿಯ ಪುತ್ರ, ನಟ ಪುನೀತ್ ರಾಜ್ ಕುಮಾರ್ ಅವರು ನಿಧನರಾದರು. ಅವರಿಗೆ ಕೇವಲ 46 ವರ್ಷಗಳಾಗಿತ್ತು ಇದು ನಮಗೆಲ್ಲರಿಗೂ ತೀವ್ರ ಆಘಾತವನ್ನುಂಟು ಮಾಡಿದೆ ದಿವಂಗತ ರಾಜ್ ಕುಮಾರ್ ಅವರ ಕುಟುಂಬ ನಮಗೆ ಯಾವತ್ತೂ ತುಂಬಾ ಹತ್ತಿರವಾಗಿದ್ದರು ಎಂದು ಬಿಗ್ ಬಿ ಬರೆದಿದ್ದಾರೆ.

ನಟ ಪುನೀತ್ ರಾಜ್ ಕುಮಾರ್ ಸಾವಿಗೆ ಅಮಿತಾಭ್ ಬಚ್ಚನ್ ಅವರು ಟ್ವಿಟ್ಟರ್‌ನಲ್ಲಿಯೂ ಸಂತಾಪ ಸೂಚಿಸಿದ್ದಾರೆ. “ಕರಾಳ ಮತ್ತು ಪ್ರಾರ್ಥನೆಯ ದಿನ .. ಕುಟುಂಬಕ್ಕೆ ಹತ್ತಿರವಿರುವ ಇಬ್ಬರು ಇಂದು ನಿಧನರಾದರು .. ಇದು ತುಂಬಾ ಕತ್ತಲೆಯಾಗಿದೆ” ಎಂದಿದ್ದಾರೆ.

ಡಗ್ಸ್‌ ಪ್ರಕರಣ : 22 ದಿನಗಳ ಬಳಿಕ ಆರ್ಯನ್‌ ಖಾನ್‌ ಜೈಲಿನಿಂದ ಬಿಡುಗಡೆ – Vishwanews24