ಇದು ಸುಳ್ಳು ಪ್ರಕರಣ, ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ : ಎಸ್​ಐಟಿ ಬಂಧನದ ಬಳಿಕ ರೇವಣ್ಣ – Vishwanews24

Featured, ರಾಜ್ಯ ನ್ಯೂಸ್

ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ : ಎಸ್​ಐಟಿ ಬಂಧನದ ಬಳಿಕ ರೇವಣ್ಣ 

ಪ್ರಜ್ವಲ್ ಕೇಸ್‌ನ ಸಂತ್ರಸ್ತ ಮಹಿಳೆಯ ಕಿಡ್ನಾಪ್ ಆರೋಪ ಹೊತ್ತಿರುವ ಮಾಜಿ ಸಚಿವ ರೇವಣ್ಣಗೆ ಈಗ ಕಷ್ಟದ ಕಾಲ ಎದುರಾಗಿದೆ. ಮೊನ್ನೆ ಎಸ್‌ಐಟಿಗೆ ಶರಣಾಗಿದ್ದ ರೇವಣ್ಣರನ್ನು 4 ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ, ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ ಅಂತ ಮೊದಲ ಸಲ ರೇವಣ್ಣ ಗುಡುಗಿದ್ದಾರೆ.

ಮಹಿಳೆ ಕಿಡ್ನಾಪ್‌ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಹೆಚ್‌.ಡಿ. ರೇವಣ್ಣ ಎಸ್​​ಐಟಿ ಸಂಕೋಲೆಗೆ ಸಿಲುಕಿದ್ದಾರೆ. ಮೊನ್ನೆ ವಶಕ್ಕೆ ಪಡೆದ ಎಸ್​​ಐಟಿ ನಿನ್ನೆ ಸಂಜೆ ನಾಲ್ಕು ದಿನಗಳ ಕಾಲ ವಿಚಾರಣೆಗಾಗಿ ತನ್ನ ಕಸ್ಟಡಿಗೆ ಪಡೆದಿದೆ.

ಕಾರ್ಕಳ: ಕಂಪೆನಿಯ ಯೂಸರ್ ನೇಮ್ ಹ್ಯಾಕ್ ಮಾಡಿ 21.14 ಲಕ್ಷ ರೂ. ವಂಚನೆ – Vishwanews24

ವೈದ್ಯಕೀಯ ತಪಾಸಣೆಗಾಗಿ ಬೌರಿಂಗ್‌ ಆಸ್ಪತ್ರೆಗೆ ಕರೆತರಲಾಗಿತ್ತು.. ಈ ವೇಳೆ ಇಡೀ ಬೆಳವಣಿಗೆ ಬಗ್ಗೆ ರೇವಣ್ಣ ಮಾಧ್ಯಮಗಳಿಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.. ಯಾವುದೇ ಪುರಾವೆ ಇಲ್ಲದೇ ದುರುದ್ದೇಶದಿಂದ ನನ್ನ ಮೇಲೆ ಕೇಸ್‌ ದಾಖಲಿಸಲಾಗಿದೆ. ಇದು ಸುಳ್ಳು ಪ್ರಕರಣ, ರಾಜಕೀಯ ಷಡ್ಯಂತ್ರ ಅಂತ ಆರೋಪಿಸಿದ್ರು. ಮುಂದೆ ಎಲ್ಲಾ ಸತ್ಯ ಹೊರಬರಲಿದೆ ಅಂತ ಕಿಡಿಕಾರಿದರು.

 

ಉಡುಪಿ:  ವಾಟ್ಸಾಪ್‌ಗೆ ಬಂದ ಲಿಂಕ್‌ ಕ್ಲಿಕ್‌ ಮಾಡಿ 1.75 ಲಕ್ಷ ರೂ. ಕಳಕೊಂಡ ವ್ಯಕ್ತಿ – Vishwanews24

Leave a Reply