ಇನ್ನು ಮುಂದೆ ಫೋನ್ ನಂಬರ್ ನೀಡದೇ ಚಾಟ್ ಮಾಡಬಹುದು : ಏನಿದು ವಾಟ್ಸಪ್‌ ಹೊಸ ಬದಲಾವಣೆ ? – vishwanews24

Featured, ಅಂತಾರಾಷ್ಟ್ರೀಯ ನ್ಯೂಸ್

ಇನ್ನು ಮುಂದೆ ಫೋನ್ ನಂಬರ್ ನೀಡದೇ ಚಾಟ್ ಮಾಡಬಹುದು : ಏನಿದು ವಾಟ್ಸಪ್‌ ಹೊಸ ಬದಲಾವಣೆ ?

ಕ್ಯಾಲಿಫೋರ್ನಿಯಾ : ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಆ್ಯಪ್ ವಾಟ್ಸಪ್ ತನ್ನ ಬಳಕೆದಾರರ ಗೌಪ್ಯತೆಯನ್ನು ಮತ್ತಷ್ಟು ಬಲಪಡಿಸಲು ಶೀಘ್ರದಲ್ಲೇ ಅತ್ಯಂತ ಪ್ರಮುಖ ಬದಲಾವಣೆಯೊಂದನ್ನು ತರಲು ಸಜ್ಜಾಗಿದೆ.

ಇನ್ನು ಮುಂದೆ ಬಳಕೆದಾರರು ತಮ್ಮ ವೈಯಕ್ತಿಕ ಫೋನ್ ನಂಬರ್ ಹಂಚಿಕೊಳ್ಳದೆಯೇ ಇತರರೊಂದಿಗೆ ಚಾಟ್ ಮಾಡಲು ಅನುವು ಮಾಡಿಕೊಡುವ ಯೂಸರ್ ನೇಮ್ ವೈಶಿಷ್ಟ್ಯವನ್ನು ವಾಟ್ಸಪ್ ಪರೀಕ್ಷಿಸುತ್ತಿದೆ.

ಮಂಗಳೂರು: ಮಸೀದಿಗೆ ತೆರಳಿದ್ದ ವ್ಯಕ್ತಿ ನಾಪತ್ತೆ ; ಗುರುಪುರ ಸೇತುವೆ ಮೇಲೆ ಸ್ಕೂಟರ್ ಪತ್ತೆ – vishwanews24

ಪ್ರಸ್ತುತ ಈಗ ವಾಟ್ಸಪ್‌ನಲ್ಲಿ ಯಾರೊಂದಿಗಾದರೂ ಚಾಟ್ ಮಾಡಬೇಕಾದರೆ ಅಥವಾ ಗ್ರೂಪ್‌ಗೆ ಸೇರಬೇಕಾದರೆ ಫೋನ್ ನಂಬರ್ ಕಾಣಿಸುವುದು ಕಡ್ಡಾಯ. ಆದರೆ ಈ ಹೊಸ ಫೀಚರ್‌ ಜಾರಿಯಾದ ನಂತರ ಇನ್‌ಸ್ಟಾಗ್ರಾಮ್, ಎಕ್ಸ್ ಅಥವಾ ಟೆಲಿಗ್ರಾಂ ಮಾದರಿಯಲ್ಲಿಯೇ ಪ್ರತಿಯೊಬ್ಬರಿಗೂ ವಿಶಿಷ್ಟವಾದ ಯೂಸರ್ ನೇಮ್ ನೀಡಲಾಗುತ್ತದೆ. ನಿಮ್ಮ ನಂಬರ್ ಇಲ್ಲದವರೂ ಸಹ ಕೇವಲ ನಿಮ್ಮ ಯೂಸರ್ ನೇಮ್ ಹುಡುಕುವ ಮೂಲಕ ನಿಮಗೆ ಮೆಸೇಜ್ ಕಳುಹಿಸಬಹುದಾಗಿದೆ.

ಬೆಂಗಳೂರು- ಮಂಗಳೂರು ಚತುಷ್ಪಥ ರೈಲು ಮಾರ್ಗ ಯೋಜನೆ ಅಭಿವೃದ್ದಿ: ಸೋಮಣ್ಣ – vishwanews24

ಇನ್‌ಸ್ಟಾಗ್ರಾಮ್ ಮತ್ತು ಟೆಲಿಗ್ರಾಂ ಆ್ಯಪ್‌ಗಳ ಮಾದರಿಯಲ್ಲಿಯೇ ವಾಟ್ಸಪ್‌ನಲ್ಲೂ ತಮ್ಮ ಇಷ್ಟದ ಯೂಸರ್ ನೇಮ್ ಅನ್ನು ಸೆಟ್ ಮಾಡಿಕೊಳ್ಳಬಹುದು. ವಿಶಿಷ್ಟವಾದ ಯೂಸರ್ ನೇಮ್‌ಗಳನ್ನು ರಿಸರ್ವ್ ಮಾಡಲು ಅವಕಾಶ ಸಿಗಲಿದೆ. ಮೊದಲು ಬಂದವರಿಗೆ ಆದ್ಯತೆಯ ಮೇರೆಗೆ ಈ ಹೆಸರುಗಳು ಸಿಗಲಿದ್ದು, ನಿಮ್ಮ ಪ್ರೊಫೈಲ್‌ಗೆ ಸೂಕ್ತವಾದ ಹೆಸರನ್ನು ನೀವೇ ಆಯ್ದುಕೊಳ್ಳಬಹುದು. ಇದರಿಂದ ಅಪರಿಚಿತರಿಗೆ ನಿಮ್ಮ ಫೋನ್ ನಂಬರ್ ತಿಳಿಯದಂತೆ ಗೌಪ್ಯತೆ ಕಾಯ್ದುಕೊಳ್ಳಬಹುದು.

Leave a Reply