ಇನ್ನೆರಡು ವರ್ಷದಲ್ಲಿ ಶೇ. 100 ರಷ್ಟು ಖಚಿತ ನಾವು ವಾಪಸ್ ಅಧಿಕಾರಕ್ಕೆ ಬರುತ್ತೇವೆ : ಸಿದ್ದರಾಮಯ್ಯ -Vishwanews24
ಇನ್ನೆರಡು ವರ್ಷದಲ್ಲಿ ಶೇ. 100 ರಷ್ಟು ಖಚಿತ ನಾವು ವಾಪಸ್ ಅಧಿಕಾರಕ್ಕೆ ಬರುತ್ತೇವೆ : ಸಿದ್ದರಾಮಯ್ಯ -Vishwanews24
ಮೈಸೂರು: ಇನ್ನೆರಡು ವರ್ಷದಲ್ಲಿ ಶೇ. 100 ರಷ್ಟು ಖಚಿತ ನಾವು ವಾಪಸ್ ಅಧಿಕಾರಕ್ಕೆ ಬರುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೆ.ಆರ್.ನಗರ ತಾಲೂಕಿನ ಗಂಧನಹಳ್ಳಿ ಗ್ರಾಮದ ದೇವಾಲಯ ಉದ್ಘಾಟನೆ ವೇಳೆ ಮಾತನಾಡಿದ ಅವರು, ಮತ್ತೆ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲಿದೆ. ಅಷ್ಟೇ ಅಲ್ಲದೇ ನಾವು ಅಧಿಕಾರಕ್ಕೆ ಬಂದು ಬಡವರಿಗೆ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಘೋಷಿಸಿದರು. ಇದೇ ವೇಳೆ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಮಾಡಿ ಮಾತನಾಡಿದ ಅವರು ಸಂಗೊಳ್ಳಿ ರಾಯಣ್ಣ ಹುಟ್ಟಿದ ಹಾಗೂ ಮೃತರಾದ ಸ್ಥಳಗಳನ್ನು ಅಭಿವೃದ್ಧಿ ಪಡಿಸಲು ನಾನು ಮುಂದಾಗಿದ್ದೆ. ಇದಕ್ಕೆ 260 ಕೋಟಿ ಕೊಟ್ಟಿದ್ದೆ. ಅಷ್ಟರಲ್ಲಿ ನಮ್ಮ ಸರ್ಕಾರ ಹೊಯ್ತು. ಈಗಲಾದ್ರು ಹಣ ಬಿಡುಗಡೆ ಮಾಡಿಸಿ ಎಲ್ಲ ಕೆಲಸ ಮುಗಿಸಯ್ಯ ಎಂದು ಅದೇ ವೇದಿಕೆಯಲ್ಲಿ ಹಾಜರಿದ್ದ ಸಚಿವ ಆರ್.ಶಂಕರ್‌ಗೆ ತಾಕೀತು ಮಾಡಿದರು.
ಉಡುಪಿ : ರೈತ ಸಂತೆಯ ಮೂಲಕ ಮಧ್ಯವರ್ತಿಗಳ ಹಾವಳಿ ತಪ್ಪಿಸಿ : ಜಿಲ್ಲಾಧಿಕಾರಿ ಜಿ. ಜಗದೀಶ್ -Vishwanews24
ಇದೇ ವೇಳೆ ಸರ್ಕಾರದಲ್ಲಿ ನೀವು ಮೂರು ಜನ ಮಂತ್ರಿಗಳಿದ್ದೀರಿ ಎಲ್ಲ ಸೇರಿಕೊಂಡು ಬಿಡುಗಡೆ ಮಾಡಿಸಿ ಅಂತ ಹೇಳಿದರು. ಈ ವೇಳೆ ಸಭೆಯಲ್ಲಿದ್ದವರು ನಾಲ್ಕು ಜನ ಕುರುಬ ಮಂತ್ರಿಗಳು ಸರ್ ಎಂದು ಮಾಹಿತಿ ನೀಡಿದಾಗ, ಇನ್ನೊಬ್ಬ ಯಾರಯ್ಯ? ಓಹ್… ಆ ಈಶ್ವರಪ್ಪ.. ಅವನಾ? ಸರಿ ಸರಿ ನಾಲ್ಕು ಜನ ಕುರುಬ ಮಂತ್ರಿಗಳಿದ್ದಿರಾ. ಎಲ್ಲರು ಸೇರಿಕೊಂಡು ಸಂಗೊಳ್ಳಿ ರಾಯಣ್ಣ ಪ್ರಾಧಿಕಾರಕ್ಕೆ ಹಣ ಬಿಡುಗಡೆ ಮಾಡಿಸಿ. ಎಲ್ಲರೂ ಯಡಿಯೂರಪ್ಪ ಕುತ್ತಿಗೆ ಮೇಲೆ ಕುಳಿತು ಕೆಲಸ ಮಾಡಿಸಿ, ಇನ್ನೆರಡು ವರ್ಷದಲ್ಲಿ ಬಿಡುಗಡೆ ಮಾಡಿಸದಿದ್ದರೆ ನಾವೇ ಬಂದು ಹಣ ಬಿಡುಗಡೆ ಮಾಡುತ್ತೇವೆ ಎನ್ನುವ ಮೂಲಕ ಮುಂದಿನ ಸರ್ಕಾರ ತಮ್ಮದೇ ಎಂದು ಭರವಸೆ ವ್ಯಕ್ತಪಡಿಸಿದರು.
