ಇನ್ಸ್ಟಾಗ್ರಾಮ್‌  ಲಿಂಕ್‌  ಜಾಹೀರಾತು ನಂಬಿ 60 ಸಾವಿರಕ್ಕೂ ಅಧಿಕ ಹಣ ಕಳೆದುಕೊಂಡ ಯುವತಿ – vishwanews24

Featured, ಉಡುಪಿ

ಇನ್ಸ್ಟಾಗ್ರಾಮ್‌  ಲಿಂಕ್‌  ಜಾಹೀರಾತು ನಂಬಿ 67,000 ರೂ. ಹಣ ಕಳೆದುಕೊಂಡ ಯುವತಿ

ಕೋಟ: ಇನ್ಸ್ಟಾಗ್ರಾಮ್‌  ಖಾತೆಯಲ್ಲಿ ಬಂದ ಜಾಹೀರಾತು ನಂಬಿ, ಮನೆಯಲ್ಲಿ ಕುಳಿತು ಮೊಬೈಲ್‌ ನಲ್ಲಿ ಕೆಲಸ ಮಾಡುವ ವಿಚಾರದಲ್ಲಿ ಯುತಿಯೊಬ್ಬಳು 60 ಸಾವಿರಕ್ಕೂ ಅಧಿಕ ಹಣವನ್ನು ಕಳೆದುಕೊಂಡಿರುವ ಪ್ರಕರಣ ಕೋಟ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

ಮನೆಯಲ್ಲಿಯೇ ಇದ್ದು ಮೊಬೈಲ್‌ ನಲ್ಲಿ ಕೆಲಸ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಜಾಹೀರಾತುದಾರರು ಒಂದು ಲಿಂಕ್‌ ಅನ್ನು ಅಕ್ಷತಾ(26 ವರ್ಷ) ಎಂಬಾಕೆ ಸ್ವೀಕರಿಸಿದ್ದರು. ಅದರಂತೆ ಅಕ್ಷತಾ ಲಿಂಕ್‌ ಒತ್ತಿದಾಗ ಅದು ಒಂದು ವಾಟ್ಸಪ್‌ ನಂಬರ್‌ ಗೆ ಸಂಪರ್ಕಗೊಂಡಿತ್ತು. ಅದರಲ್ಲಿ ಮೊಬೈಲ್‌ ನಲ್ಲಿ ಮಾಡುವ ಕೆಲಸದ ಬಗ್ಗೆ ಮಾಹಿತಿ ನೀಡಿದ್ದರು.

ಹಲ್ಲೆ ಪ್ರಕರಣ : ನಟ ಧ್ರುವ ಸರ್ಜಾ ಮ್ಯಾನೇಜರ್ ಅಶ್ವಿನ್‌ ಅರೆಸ್ಟ್ – vishwanews24

ಆರಂಭದಲ್ಲಿ ನೋಂದಣಿ ಶುಲ್ಕ ಎಂದು ಅಕ್ಷತಾ ಪೋನ್‌ ಪೇ ಮೂಲಕ 100 ರೂ. ಸಂದಾಯ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ನಂತರ ಬೋನಸ್‌ ಎಂದು 60 ರೂಪಾಯಿ ಅಕ್ಷತಾಗೆ ನೀಡಲಾಗಿತ್ತು. ಹೀಗೆ ಒಂದೇ ದಿನ 1,615 ರೂಪಾಯಿ ಅವರು ಪಾವತಿ ಮಾಡಿದ್ದರು.

ನಂತರ 1/09/2024ರಂದು ಜಾಹೀರಾತುದಾರರು 9 ಆರ್ಡರ್‌ ಗಳನ್ನು ಮುಗಿಸುವಂತೆ ತಿಳಿಸಿ, ಮೊದಲಿಗೆ 500 ರೂ. ಪಾವತಿಸಿ ಅಕ್ಷತಾ ಕೆಲಸ ಆರಂಭಿಸಿದ್ದು, ಪ್ರತಿಯೊಂದು ಆರ್ಡರ್‌ ಗೂ ಹಣ ಪಾವತಿಸಲು ಅವರು ತಿಳಿಸಿದ್ದು, ಅದರಂತೆ ಅಕ್ಷತಾ ಒಟ್ಟು 67,330 ರೂಪಾಯಿ ಹಣ ಪಡೆದು ತನಗೆ ವಂಚನೆ ಮಾಡಿರುವುದಾಗಿ ಕೋಟ ಪೊಲೀಸ್‌ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಉಡುಪಿ : ಶಿಕ್ಷಕರ ಮೇಲೆ ಕಾಂಗ್ರೆಸ್ ಪಕ್ಷಕ್ಕೆ ವಿಶೇಷ ಗೌರವ, ಅತೀವ ಕಾಳಜಿ ಇದೆ : ರಮೇಶ್ ಕಾಂಚನ್ – vishwanews24

Leave a Reply