ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ರಾಜಕಾರಣವನ್ನು ದೇಶದಿಂದ ಕಿತ್ತೊಗೆಯಿರಿ , ನಿಮ್ಮ ಕನಸಿಗೆ ಕಾಂಗ್ರೆಸ್‌ ಧ್ವನಿಯಾಗುತ್ತದೆ : ಪ್ರಿಯಾಂಕಾ ಗಾಂಧಿ

Featured, ರಾಷ್ಟ್ರ ನ್ಯೂಸ್

ಫತೇಪುರ, : ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ರಾಜಕಾರಣವನ್ನು ದೇಶದಿಂದ ಕಿತ್ತೊಗೆಯಿರಿ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.

ಉತ್ತರ ಪ್ರದೇಶದ ಫತೇಪುರದಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಿದ ಪ್ರಿಯಾಂಕಾ, ”ಬಿಜೆಪಿ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ದೇಶದಲ್ಲಿ ಪ್ರಜಾಪ್ರಭುತ್ವ ಅಪಾಯದ ಸ್ಥಿತಿಯಲ್ಲಿದೆ. ಸುಳ್ಳಿನ ಭರವಸೆಗಳ ಮೂಲಕ ಬಿಜೆಪಿ ಜನರನ್ನು ವಂಚಿಸುತ್ತಿದೆ. ಧರ್ಮಗಳ ಮಧ್ಯೆ ಒಡಕು ಸೃಷ್ಟಿಸುವ ಈ ಪಕ್ಷವನ್ನು ದೂರವಿಡಿ,” ಎಂದು ಹೇಳಿದರು.

”ಪ್ರಜಾಪ್ರಭುತ್ವದಲ್ಲಿ ಜನಶಕ್ತಿಯೇ ಪ್ರಬಲ. ಆದರೆ ಇತ್ತೀಚಿನ ವರ್ಷದಲ್ಲಿ ದೇಶದಲ್ಲಿ ಪ್ರಧಾನಿ ಮೋದಿ ಸರಕಾರದ ವಿರುದ್ಧ ಮಾತನಾಡುವ ಶಕ್ತಿಯನ್ನೇ ಉಡುಗಿಸುವ ಪ್ರಯತ್ನ ನಡೆಯುತ್ತಿದೆ. ಪ್ರತಿಭಟನಾಕಾರರ ಮೇಲೆ ಹಲ್ಲೆಗಳು ನಡೆಯುತ್ತಿವೆ,” ಎಂದು ಆಪಾದಿಸಿದ ಪ್ರಿಯಾಂಕಾ ಕೇವಲ ನಿಮ್ಮ ಪ್ರದೇಶದ ಅಗತ್ಯಗಳಿಗಷ್ಟೇ ಅಲ್ಲದೇ ಇಡೀ ಭಾರತದ ಒಳಿತಿಗಾಗಿ ಹಾಗೂ ಭವಿಷ್ಯದ ಪೀಳಿಗೆಗಾಗಿ ರಾಜಕಾರಣದಲ್ಲಿ ಬದಲಾವಣೆ ತನ್ನಿ. ನಿಮ್ಮ ಕನಸಿಗೆ ಕಾಂಗ್ರೆಸ್‌ ಧ್ವನಿಯಾಗುತ್ತದೆ ಎಂದು ಜನತೆಗೆ ಕರೆ ನೀಡಿದರು.

‘ದೇಶದ ಪ್ರಜಾಪ್ರಭುತ್ವದಲ್ಲಿ ಜನಶಕ್ತಿಯೇ ಪ್ರಬಲ. ಆದರೆ ಇತ್ತೀಚಿನ ವರ್ಷದಲ್ಲಿ ದೇಶದಲ್ಲಿ ಪ್ರಧಾನಿ ಮೋದಿ ಸರಕಾರದ ವಿರುದ್ಧ ಮಾತನಾಡುವ ಶಕ್ತಿಯನ್ನೇ ಉಡುಗಿಸುವ ಪ್ರಯತ್ನ ನಡೆಯುತ್ತಿದೆ. ಪ್ರತಿಭಟನಾಕಾರರ ಮೇಲೆ ಹಲ್ಲೆಗಳು ನಡೆಯುತ್ತಿವೆ ಎಂದು ದೂರಿದರು.